ಈಗಾಗಲೇ ಅವಳಿ ಜವಳಿ ಮಕ್ಕಳ ತಂದೆತಾಯಿಯಾಗಿರುವ ಭಾರತದ ಕ್ಯೂಟ್ ಆ್ಯಂಡ್ ಸ್ವೀಟ್ ಕ್ರೀಡಾದಂಪತಿ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಾಲ್ ಮನೆಗೆ ಇದೀಗ ಪುಟ್ಟ ದೇವತೆಯ ಆಗಮನವಾಗಿದೆ. ತಮಗೆ ಹೆಣ್ಣು ಮಗು ಹುಟ್ಟಿರುವುದಾಗಿ ತಿಳಿಸಿರುವ ದಂಪತಿ, ಮಗುವಿನ ಹೆಸರು ರಾಹಾ ಪಳ್ಳಿಕಾಲ್ ಕಾರ್ತಿಕ್ ಎಂದು ಘೋಷಿಸಿದ್ದಾರೆ.
2015ರಲ್ಲಿ ವಿವಾಹವಾದ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಮತ್ತು ಸ್ಕಾ÷್ವಷ್ ತಾರೆ ದೀಪಿಕ್ ಪಳ್ಳಿಕಾಲ್ ಅವರು ಕಳೆದ ವರ್ಷ ಆಗಸ್ಟ್ ನಲ್ಲಿ ತಮ್ಮ ವಿವಾಹದ 10ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. 2021ರಲ್ಲಿ ದಂಪತಿಗೆ ಕಬೀರ್ ಮತ್ತು ಜಿಯಾನ್ ಎಂಬ ಅವಳಿ ಜವಳಿ ಪುತ್ರರು ಜನಿಸಿದರು.
ಹೆಣ್ಣುಮಗು ಹುಟ್ಟಿದ್ದಕ್ಕೆ ಸಂತಸಇದೀಗ ಹೆಣ್ಣು ಮಗು ಹುಟ್ಟಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ “ನಮ್ಮ ಹೃದಯದಲ್ಲಿ ಆಶೀರ್ವಾದ ಮತ್ತು ಪದಗಳಿಗೆ ಮೀರಿದ ಕೃತಜ್ಞತೆಯೊಂದಿಗೆ, ನಾವು ನಮ್ಮ ಅಮೂಲ್ಯ ಮಗಳನ್ನು ಈ ಜಗತ್ತಿಗೆ ಸಂತೋಷದಿAದ ಸ್ವಾಗತಿಸುತ್ತೇವೆ. ಕಬೀರ್ ಮತ್ತು ಜಿಯಾನ್ ತಮ್ಮ ಪುಟ್ಟ ಸಹೋದರಿ ರಾಹಾ ಪಳ್ಳಿಕಾಲ್ ಕಾರ್ತಿಕ್ ಅವರನ್ನು ಪರಿಚಯಿಸಲು ರೋಮಾಂಚನಗೊAಡಿದ್ದಾರೆ. ಪ್ರೀತಿಯಿಂದ, ದೀಪಿಕಾ ಮತ್ತು ದಿನೇಶ್” ಎಂದು ದಂಪತಿ ಪೋಸ್ಟ್ ಮಾಡಿದ್ದಾರೆ. ಈ ಜೋಡಿ 2015ರ ಆಗಸ್ಟ್ 25ರಂದು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಕ್ಕನುಗುಣವಾಗಿ ವಿವಾಹವಾಗಿತು.ದಿನೇಶ್ ಕಾರ್ತಿಕ್ ಅವರು 2004ರಿಂದ 2022ರವರೆಗೆ ಸುಮಾರು 19 ವರ್ಷಗಳ ಕಾಲ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಭಾರತ ಕ್ರಿಕೆಟ್ ನ ದಂತಕತೆ ಮಹೇಂದ್ರ ಸಿಂಗ್ ಧೋನಿ ಮತ್ತು ದಿನೇಶ್ ಕಾರ್ತಿಕ್ ಅವರು ಸಮಕಾಲೀನರಾಗಿದ್ದರಿಂದ ಭಾರತ ತಂಡದಲ್ಲಿ ಅವರಿಗೆ ವಿಕೆಟ್ ಕೀಪರ್ ಆಗಿ ಹೆಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಆದರೆ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಉತ್ತಮ ಪ್ರದರ್ಶನ ನೀಡಿದ್ದರು. ವೈಟ್ ಬಾಲ್ ಕ್ರಿಕೆಟ್ ನಲ್ಲಿ ಉತ್ತಮ ಫಿನಿಶರ್ ಆಗಿ ಗುರ್ತಿಸಿಕೊಂಡರು. ಭಾರತದ ಪರ 26 ಟೆಸ್ಚ್, 94 ಏಕದಿನ ಮತ್ತು 60 ಟಿ20 ಪಂದ್ಯಗಳನ್ನು ಅವರು ಆಡಿದ್ದಾರೆ. ಸ್ಪರ್ಧಾತ್ಮಕ ಆಟದಿಂದ ನಿವೃತ್ತರಾದ ನಂತರ ಕೋಚಿಂಗ್ ಮತ್ತು ಕಾಮೆಂಟರಿಯನ್ನು ನೆಚ್ಚಿಕೊಂಡಿದ್ದಾರೆ. ಪ್ರಸ್ತುತ ಆರ್ ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.ಸ್ಕ್ವಾಷ್ ಸಾಧಕಿ ದೀಪಿಕಾ ಇನ್ನು ದೀಪಿಕಾ ಪಳ್ಳಿಕಾಲ್ ಅವರು ಸ್ಟಾ÷್ವಷ್ ನಲ್ಲಿ ವಿಶ್ವದ ಟಾಪ್ 10 ಶ್ರೇಯಾಂಕದೊಳಗೆ ಪ್ರವೇಶಿಸಿದ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಪದಕಗಳನ್ನು ಪಡೆದಿದ್ದಾರೆ. ಕೊನೆಯ ಬಾರಿ ಅವರು ಅಕ್ಟೋಬರ್ 2023 ರಲ್ಲಿ ಹ್ಯಾಂಗ್ಝೌ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿ ಮಿಶ್ರ ಡಬಲ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಅವರ ಕ್ರೀಡಾಸಾಧಗಾಗಿ ಪದ್ಮಶ್ರೀಯಿಂದ ಪುರಸ್ಕೃತರಾಗಿದ್ದಾರೆ.
ದಿನೇಶ್ ಕಾರ್ತಿಕ್- ದೀಪಿಕಾ ಪಳ್ಳಿಕಾಲ್ ದಂಪತಿಗೆ 3ನೇ ಮಗುವಿನ ಜನನ



