ಬೇಲೂರು: ನಗರದ ಹಳೇಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕದ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.ಬೇಲೂರು ತಾಲೂಕು ಭಾವಸಾರ ಕ್ಷತ್ರಿಯ ಸಮಾಜದಿಂದ ಶ್ರೀ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ವಿಶೇಷ ಪೂಜೆಯನ್ನು ಬೇಲೂರು ಭಾವಸಾರ ಕ್ಷತ್ರಿಯ ಸಮಾಜ ಬಾಂಧವರು ಮತ್ತು ನಗರದ ಸಹಸ್ತಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಭಗವಂತ ರಾವ್ ದೀಪಾವಳಿ ಕಾರ್ತಿಕ ಮಾಸದ ಅಮಾವಾಸ್ಯೆ ಅಂಗವಾಗಿ ಶ್ರೀ ಪಾಂಡುರಂಗ ಸ್ವಾಮಿಗೆ ಅಭಿಷೇಕ ಪುಷ್ಪಲಂಕಾರಗಳಿಂದ ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಮುಖ್ಯದ್ವಾರದಲ್ಲಿ ಕಿರ್ತಿಕೆ ಜ್ಯೋತಿ ಹಚ್ಚುವ ಮೂಲಕ ಕಡೆ ಕಾರ್ತಿಕ ಪೂಜೆ ನೆರವೇರಿಸಲಾಗುತ್ತದೆ ಮತ್ತು ನಾಡಿನಲ್ಲಿ ಮಳೆ ಬೆಳೆ ಶಾಂತಿ ನೆಮ್ಮದಿ ನೆಲೆಸಿ ನಾಡಿನ ಜನತೆಗೆ ಶ್ರೀ ಪಾಂಡುರಂಗ ಆರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸಲಾಗುತ್ತದೆ ಎಂದು ಹೇಳಿದರು.
ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ದೇವಾಲಯದ ಮಹಿಳಾ ಮಂಡಳಿಯ ಶ್ರೀ ಮತಿ ಜ್ಯೋತಿ ಗಣೇಶ್ ಮಾತನಾಡಿ ಕಡೆ ಕಾರ್ತಿಕದ ಅಂಗವಾಗಿ ಸಮಾಜದ ಮಹಿಳೆಯರು ಸಾವಿರಾರು ದೀಪಗಳನ್ನು ಬೆಳಗಿಸಿ ವಿವಿಧ ಬಗೆಯ ರಂಗೋಲಿಗಳನ್ನು ಚಿತ್ರಿಸಿ ಪಾಂಡುರಂಗ ಸ್ವಾಮಿಯ ದೇವಾಲಯವನ್ನು ಅಲಂಕರಿಸಲಾಗುತ್ತದೆ ಮತ್ತು ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ಮಹಿಳೆಯರಿಂದ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿಸಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಪ್ರಸಾದ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಬೇಲೂರು ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಮಾಜಿ ಅಧ್ಯಕ್ಷ ನಂದಕುಮಾರ್. ಬಾಬುರಾವ್. ಕೃಷ್ಣಮೂರ್ತಿ. ಗಣೇಶ್. ಬೇಕರಿ ಮಂಜುನಾಥ್. ಕಿರಣ್ ಗುಜರ್. ಜಯಣ್ಣ ಟೈಲರ್. ಗಣೇಶ್ ರಾವ್. ದೀಪಕ್ ಜೆ.ಪಿ ನಗರ. ಕಾರ್ತಿಕ್. ಗೋಪಿ.ಅರುಣ್ ಹೊಸನಗರ. ಸಂಪತ್ ಕುಂಬಾರ ಬೀದಿ. ಸೇರಿದಂತೆ ಮಹಿಳಾ ಮಂಡಳಿಯ ಸರ್ವ ಸದಸ್ಯರು ಮತ್ತು ಸಮಾಜ ಬಾಂಧವರು ಭಕ್ತರು ಹಾಜರಿದ್ದರು.