ತಿ.ನರಸೀಪುರ: ಹೈ ವೋಲ್ಟೇಜ್ ಕ್ಷೇತ್ರ ವರುಣಾ ವ್ಯಾಪ್ತಿಯ ಹುಣಸೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಹೆಚ್ಚಿದ್ದು,ಯಾವುದೇ ಗಲಾಟೆ ವಘೇರೆಗಳಿಗೆ ಅವಕಾಶ ನೀಡದೆ ಶಾಂತಿಯುತ ಮತದಾನ ನಡೆಸಿದ್ದಾರೆ.
ತಾಲೂಕಿನ ವರುಣಾ ಕ್ಷೇತ್ರ ವ್ಯಾಪ್ತಿಯ ಹುಣಸೂರು ಮತಗಟ್ಟೆ ಸಂಖ್ಯೆ 108ರಲ್ಲಿ ಪರಿಶಿಷ್ಟ ಜಾತಿಯ 980,ಪರಿಶಿಷ್ಟ ಪಂಗಡ 300 ಮತ್ತು ವಿಶ್ವಕರ್ಮ ಸಮುದಾಯದ 20 ಮತಗಳಿದ್ದು ,ಎಲ್ಲ ವರ್ಗದವರು ಪರಸ್ಪರ ಹೊಂದಾಣಿಕೆ ತಮಗಿಷ್ಟ ಬಂದವರಿಗೆ ಶಾಂತಿಯುತವಾಗಿ ಮತದಾನ ಮಾಡಿದರು.
ಕಾಂಗ್ರೆಸ್ ಮುಖಂಡ ಹುಣಸೂರು ಬಸವಣ್ಣ ಮಾತನಾಡಿ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರ ಮತ ಹಾಕುವಂತೆ ಮತದಾರರಲ್ಲಿ ಮನವೊಲಿಸಲಾಗುತ್ತಿದೆ.ಜನರು ಉತ್ತವಾಗಿ ಕಾಂಗ್ರೆಸ್ ಪರ ಹೆಚ್ಚು ಒಲವು ಹೊಂದಿದ್ದು,ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯರವರು ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.
ಬಿಜೆಪಿ ಮುಖಂಡ ಹುಣಸೂರು ರಾಚಪ್ಪ ಮಾತನಾಡಿ, ರಾಜ್ಯ ಸರ್ಕಾರ ಮಾಡಿದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಪರ ಮತಯಾಚನೆ ಮಾಡಲಾಗಿದ್ದು,ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವು ಶತಸಿದ್ಧ ಎಂದರು.
ಸಂದರ್ಭದಲ್ಲಿ ಗಾಂಧಿ ಕೃಷ್ಣ, ಮಹದೇವಸ್ವಾಮಿ, ಗ್ರಾ .ಪಂ. ಉಪಾಧ್ಯಕ್ಷ ನಾಗರಾಜು ಇತರರು ಹಾಜರಿದ್ದರು.
Leave a Review