ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಶಾಸಕರಿಗೆ ಟಿಕೆಟ್ ನೀಡುವ ಸಂಬಂಧ ಇಂದು ಮಹತ್ವದ ಚರ್ಚೆ ನಡೆಯಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಈ ಸಭೆ ನಡೆಯಲಿದೆ.
ಸಭೆಯಲ್ಲಿ ಕೆಎಸ್ಸಿಎ, ಡಿಎನ್ಎ ಹಾಗೂ ಆರ್ಸಿಬಿ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಸಹ ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ತಮಗೆ ಐಪಿಎಲ್ ಪಂದ್ಯ ವೀಕ್ಷಿಸಲು ಟಿಕೆಟ್ ಬೇಕೆಂದು ಶಾಸಕರು ವಿಧಾನಸಭಾ ಕಲಾಪದಲ್ಲಿ ಸಭಾಧ್ಯಕ್ಷರಿಗೆ ಬೇಡಿಕೆಯಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಸೂಚನೆ ಮೇರೆಗೆ ಕೆಎಸ್ಸಿಎ ಮತ್ತು ಕ್ರಿಕೆಟ್ ಪಂದ್ಯ ಆಯೋಜಕರಿಗೆ ಶಾಸಕರಿಗೆ ಟಿಕೆಟ್ ನೀಡಲು ಸಮ್ಮತಿ ಸೂಚಿಸಿದ್ದು, ಒಬ್ಬರಿಗೆ ಎಷ್ಟು ಟಿಕೆಟ್ ನೀಡಬೇಕು ಎಂದು ಇಂದು ಮಧ್ಯಾಹ್ನ ಚರ್ಚೆ ನಡೆಯಲಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆಯುವ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಲಿದ್ದು ಚರ್ಚೆಯಲ್ಲಿ ಓರ್ವ ಶಾಸಕರಿಗೆ ಎಷ್ಟು ಟಿಕೆಟ್ ನೀಡಬೇಕು. ಯಾವ ಸ್ಟ್ಯಾಂಡ್ನಲ್ಲಿ ಅವಕಾಶ ಕಲ್ಪಿಸಬೇಕು ಎಂಬುದರ ಬಗ್ಗೆ ನಿರ್ಧಾರವಾಗಲಿದೆ.
ಶಾಸಕರಿಗೆ ಹೆಚ್ಚುವರಿ ಕ್ರಿಕೆಟ್ ಟಿಕೆಟ್ ಬಗ್ಗೆ ಚರ್ಚೆ



