ಬೆಂಗಳೂರು: ಇಂದಿನಿAದ ಆರಂಭಗೊAಡಿರುವ ಜಾತಿಗಣತಿಗೆ ಒಕ್ಕಲಿಗ, ಲಿಂಗಾಯತ ಸಮುದಾಯದ ತೀವ್ರ ವಿರೋಧ ವ್ಯಕ್ತಪಡಿಸಿದೆ.೧೫ ದಿನಗಳಲ್ಲಿ ಸಮೀಕ್ಷೆ ಮಾಡಲು ಸಾಧ್ಯವಿಲ್ಲ. ೩ ತಿಂಗಳು ಕಾಲ ಮುಂದೂಡುವAತೆ ಒತ್ತಾಯ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಒಕ್ಕಲಿಗ, ಲಿಂಗಾಯತ ಸಮುದಾಯದ ಮುಖಂಡರು ಮುಂದೂಡುವAತೆ ಒತ್ತಾಯ ಮಾಡಿದ್ದಾರೆ.ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಸಮೀಕ್ಷೆ ಮುಂದೂಡುವAತೆ ಖರ್ಗೆಗೆ ಬಲವಾಗಿ ಮನವಿ ಮಾಡಿದ ಮುಖಂಡರು ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ರಾಜ್ಯ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ನಾಗರಾಜ್ ಯಲಚವಾಡಿ ಮಾತನಾಡಿ, ಜಾತಿಗಣತಿ ಸಮೀಕ್ಷೆ ಮುಂದೂಡಿ ಎಂದು ಮನವಿ ಮಾಡಿದ್ದೇವೆ. ಸಮೀಕ್ಷೆ ನಡೆಸಲು ಎಲ್ಲಾ ಮನೆಗಳಿಗೆ ನಂಬರ್ ನೀಡಿಲ್ಲ. ಸುಮಾರು ೧೫ರಿಂದ ೨೦ಪ್ರಮುಖ ಜಾತಿಗಳಿವೆ. ಒಕ್ಕಲಿಗ, ಲಿಂಗಾಯತ, ಮುಸ್ಲಿಂ, ಯಾದವ, ಬಲಿಜ ಸಮುದಾಯಗಳಿಗೆ ಕೊಡ್ ನೀಡಿ. ಉಪ ಜಾತಿಗಳಿಗೆ ಕೊಡ್ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
೨೦೧೨ರಲ್ಲಿ ೮೦೦ ಜಾತಿಗಳಿದ್ದವು, ಈಗ ೧೫೬೧ ಜಾತಿಗಳಿವೆ. ಈಗ ಜಾತಿಯನ್ನ ಇಯರಿಂಗ್, ಕುಲಶಾಸ್ತç ಅಧ್ಯಯನ ಕೂಡ ಮಾಡಿಲ್ಲ. ಆಪ್ ಗೆ ತರಬೇತಿ ನೀಡಿಲ್ಲ, ತರಬೇತಿದಾರರಿಗೆ ಸರಿಯಾದ ಮಾಹಿತಿ ಕೂಡ ಇಲ್ಲ. ಒಕ್ಕಲಿಗ ಸಮುದಾಯದ ಸಭೆಯಲ್ಲೂ ಮುಂದೂಡುವAತೆ ಮನವಿ ಮಾಡಲಾಗಿತ್ತು. ಆ ವಿಚಾರವನ್ನು ಮಲ್ಲಿಕಾರ್ಜುನ ಖರ್ಗೆಯವರ ಗಮನಕ್ಕೆ ತರಲಾಗಿದೆ. ೧೫ ದಿನಗಳಲ್ಲಿ ೨೦ ಗಂಟೆ ಕೆಲಸ ಮಾಡಲು ಸಾಧ್ಯವಿಲ್ಲ ಹಾಗಾಗಿ ೩ ತಿಂಗಳು ಗಣತಿ ಕಾರ್ಯವನ್ನು ಮುಂದೂಡುವAತೆ ಮನವಿ ಮಾಡಲಾಗಿದೆ ಎಂದಿದ್ದಾರೆ.
ಪರಶೀಲನೆ ಮಾಡುವುದಾಗಿ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ ಎಂದ ಅವರು, ತೆಲಂಗಾಣದಲ್ಲಿ ಮೂರುವರೆ ಕೋಟಿ ಇರುವ ಜನಸಂಖ್ಯೆಗೆ ೪೫ ದಿನ ತೆಗೆದುಕೊಂಡಿದ್ದಾರೆ. ನಾವು ಏಳುವರೆ ಕೋಟಿ ಜನ ಇದ್ದೇವೆ , ೧೫ ದಿನ ಸರ್ವೇ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.