ಪ್ಯಾಂಪರ್ಸ್ ಇಂಡಿಯಾದಿಂದ ಹೊಸ ಮತ್ತು ಸುಧಾರಿತ ಪ್ಯಾಂಪರ್ಸ್ ಪ್ರೀಮಿಯಂ ಕೇರ್ ಬಿಡುಗಡೆ ಮಾಡಲಾಗಿದ್ದು ಅದು ಭಾರತದ #1 ಸಾಫ್ಟೆಸ್ಟ್ ಡೈಪರ್ ಆಗಿದೆ. ಇದರ ಮೃದುತ್ವವು ಮಗುವಿಗೆ ಡೈಪರ್ ಧರಿಸಿದಂತಹ ಭಾವನೆಯೇ ಮೂಡಿಸುವುದಿಲ್ಲ.
ಬೆಂಗಳೂರು: ಪಿ ಅಂಡ್ ಜಿಯ ಪ್ರತಿನಿತ್ಯ ಕೋಟ್ಯಂತರ ಶಿಶುಗಳು ಧರಿಸುವ, ಸಂತೋಷದ ಶಿಶುಗಳು ಮತ್ತು ಸಂತೋಷದ ಪೋಷಕರ ಭಾರತದ ಅತ್ಯಂತ ಮಾರಾಟದ ಡೈಪರ್ ಬ್ರಾಂಡ್ ಪ್ಯಾಂಪರ್ಸ್ ಇಂದು ಹೊಸ ಮತ್ತು ಸುಧಾರಿತ ಪ್ರೀಮಿಯಂ ಕೇರ್ ಶ್ರೇಣಿಯ ಡೈಪರ್ ಪ್ಯಾಂಟ್ ಗಳನ್ನು ಬಿಡುಗಡೆ ಮಾಡಿದ್ದು ಇದನ್ನು ಭಾರತದಾದ್ಯಂತ ತಾಯಂದಿರು #1 ಅತ್ಯಂತ ಮೃದು ಮತ್ತು #1 ಆಲ್-ಇನ್-ಒನ್ ಡೈಪರ್ ಎಂದು ಆಯ್ಕೆ ಮಾಡಿದ್ದಾರೆ.
ಹೊಸ ತಂದೆ ತಾಯಂದಿರು ಮಾಡುವ ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಒಂದು ಸೂಕ್ತವಾದ ಡೈಪರ್ ಆಯ್ಕೆ, ಏಕೆಂದರೆ ಬಹಳಷ್ಟು ಶಿಶುಗಳು ತಮ್ಮ ದಿನದ ಬಹುಕಾಲವನ್ನು ತಮ್ಮ ತಂದೆ ತಾಯಂದಿರ ಮಡಿಲಿಗಿಂತ ಡೈಪರ್ ಧರಿಸಿ ಕಳೆಯುತ್ತಾರೆ. ತಂದೆ ತಾಯಿಯರು ಸದಾ ಮಗುವಿನ ಚರ್ಮ ಮತ್ತು ಸೌಖ್ಯದ ಕುರಿತು ಕಾಳಜಿ ಹೊಂದಿರುತ್ತಾರೆ. ಅವರು ಇಡೀ ದಿನ ಮಗು ಆಡುವ ಮತ್ತು ಚಲಿಸುವಂತೆ ಹಾಗೂ ರಾತ್ರಿಯಲ್ಲಿ ನೆಮ್ಮದಿಯಾಗಿ ನಿದ್ರಿಸುವಂತೆ ಮಾಡುವ ಡೈಪರ್ ಬಯಸುತ್ತಾರೆ. ಮಗುವಿನ ಬೆಳವಣಿಗೆಗೆ ಆಟ ಮತ್ತು ರಾತ್ರಿಯ ನಿದ್ರೆ ಬಹಳ ಮುಖ್ಯವಾಗಿದೆ.
ವಿಶಿಷ್ಟ 360 ಡಿಗ್ರಿ ಹತ್ತಿಯ ಮೃದುತ್ವ ಹೊಂದಿದ ಹೊಸ ಮತ್ತು ಸುಧಾರಿತ ಪ್ಯಾಂಪರ್ಸ್ ಪ್ರೀಮಿಯಂ ಕೇರ್ ಡೈಪರ್ ಅತ್ಯಂತ ಮೃದುವಾಗಿದ್ದು ಅದು ಮಕ್ಕಳನ್ನು ಏನೂ ಧರಿಸಿಯೇ ಇಲ್ಲವೆಂಬಂತೆ ಭಾವನೆ ಮೂಡಿಸುವುದಲ್ಲದೆ ಆಲ್-ಇನ್-ಒನ್ ಡೈಪರ್ ನ ಎಲ್ಲ ಅನುಕೂಲಗಳನ್ನೂ ನೀಡುತ್ತದೆ. ಇದರಲ್ಲಿ ಇನ್-ಬಿಲ್ಟ್ ಆಂಟಿ-ರಾಶ್ ಬ್ಲಾಕೆಟ್ ಮತ್ತು ಲೋಷನ್ ಇದ್ದು ಅಲೋವೆರಾ ಮಗುವಿನ ಸೂಕ್ಷ್ಮ ಚರ್ಮವನ್ನು ದದ್ದುಗಳಿಂದ ರಕ್ಷಿಸುತ್ತದೆ.
ಪ್ರತಿ ಡೈಪರ್ ನಲ್ಲಿರುವ 10 ಮಿಲಿಯನ್ ಮೈಕ್ರೊಪೋರ್ ಗಳು ಮಗುವಿನ ಚರ್ಮವನ್ನು ಸರಾಗ ಗಾಳಿಯ ಹರಿವು ನೀಡುತ್ತವೆ; ತೊಡೆಯ ಪ್ರದೇಶಕ್ಕೆ ಕಫ್ ಗಳ ಮೂಲಕ ರಕ್ಷಣೆ ದ್ವಿಗುಣಗೊಳಿಸುತ್ತವೆ ಮತ್ತು ಮ್ಯಾಜಿಕ್ ಜೆಲ್ ಶೇ.100ರಷ್ಟು ಸೋರುವಿಕೆಯಿಂದ ರಕ್ಷಣೆ ನೀಡುವ ಮೂಲಕ ರಾತ್ರಿ ಹಗಲು ಶಿಶುವನ್ನು ಶುಷ್ಕವಾಗಿರಿಸುತ್ತದೆ.
ಈ ಡೈಪರ್ 2 ಪಟ್ಟು ವೇಗವಾಗಿ ಯಾವುದೇ ಸಾಮಾನ್ಯ ಡೈಪರ್ ಗಿಂತ ವೇಗವಾಗಿ ಹೀರಿಕೊಳ್ಳುತ್ತದೆ ಮತ್ತು ಬದಲಾಯಿಸುವ ಸಂದರ್ಭದಲ್ಲಿ ವೆಟ್ ನೆಸ್ ಇಂಡಿಕೆಟರ್ ಹಳದಿಯಿಂದ ನೀಲಿಗೆ ಬದಲಾಗುತ್ತದೆ!ಈ ಡೈಪರ್ ನ ಪ್ರತಿಯೊಂದು ವಿಶೇಷತೆಯನ್ನೂ ಪೋಷಕರಿಗೆ ಆತಂಕ ರಹಿತ ಮತ್ತು ಸುಲಭವಾದ ಡೈಪರಿಂಗ್ ಪ್ರಯಾಣ ನೀಡುವಂತೆ ಅಭಿವೃದ್ಧಿ ಮತ್ತು ವಿನ್ಯಾಸಗೊಳಿಸಲಾಗಿದೆ. ಈ ವಿನೂತನ ಆವಿಷ್ಕಾರ ಕುರಿತು ಪ್ರಾಕ್ಟರ್ ಅಂಡ್ ಗ್ಯಾಂಬಲ್ ಇಂಡಿಯಾದ ಉಪಾಧ್ಯಕ್ಷೆ ಚೇತನಾ ಸೋನಿ, ಪ್ಯಾಂಪರ್ಸ್ ನಲ್ಲಿ ನಾವು ನಮ್ಮ ಗ್ರಾಹಕರಿಂದ ಕಲಿಯುವುದರಲ್ಲಿ ಮತ್ತು ಶಿಶುಗಳು ಹಾಗೂ ಪೋಷಕರಿಗೆ ಸಂತೋಷದ ಡೈಪರಿಂಗ್ ಅನುಭವ ನೀಡುವ ಉತ್ಪನ್ನಗಳನ್ನು ಸೃಷ್ಟಿಸುವಲ್ಲಿ ಬಲವಾದ ನಂಬಿಕೆ ಇರಿಸಿದ್ದೇವೆ.
ಇದರ ಫಲಿತಾಂಶದಿಂದ ಹಲವು ವರ್ಷಗಳಿಂದ ನಾವು ಸರಿಸಾಟಿ ಇರದ ಉನ್ನತ ಕಾರ್ಯಕ್ಷಮತೆಯ ವಿಸ್ತಾರ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಶಕ್ತರಾಗಿದ್ದೇವೆ. ನಾವು ಪೋಷಕರಿಗೆ ಮಾತನಾಡಿದಾಗ ಅವರು ತಮ್ಮ ಮಗುವಿಗೆ ಹಗಲಿನಲ್ಲಿ ಆಡಲು ಮತ್ತು ಚಲಿಸಲು ಹಾಗೂ ರಾತ್ರಿಯಲ್ಲಿ ವಿಶ್ರಾಂತಿಯ ನಿದ್ರೆ ನೀಡುವ ಡೈಪರ್ ಕುರಿತು ಹೇಳಿದರು. ಇದರಿಂದ ಹೊಸ ಮತ್ತು ಸುಧಾರಿತ ಪ್ಯಾಂಪರ್ಸ್ ಪ್ರೀಮಿಯಂ ಕೇರ್ ಡೈಪರ್ ಪ್ಯಾಂಟ್ಸ್ ಬಿಡುಗಡೆ ಮಾಡಲು ಪ್ರೇರೇಪಿಸಿತು ಎಂದರು.