ಬೆಂಗಳೂರು: ರುದ್ರಾಕ್ಷಿಗಳ ಕ್ಷೇತ್ರದಲ್ಲಿ ನಂಬಿಕಾರ್ಹ ಹೆಸರಾಗಿರುವ, ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಮತ್ತು ಐಎಸ್ಒ ಮಾನ್ಯತೆ ಪಡೆದಿರುವ ರುದ್ರಾಲೈಫ್ ಸಂಸ್ಥೆ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟವನ್ನು ಬೆಂಗಳೂರಿನ ದಿ ಕ್ಯಾಪಿಟಲ್ ಹೋಟೆಲ್ (#3, ರಾಜಭವನ ರಸ್ತೆ, ವಸಂತನಗರ, ಜನರಲ್ ಪೋಸ್ಟ್ ಆಫೀಸ್ ಎದುರು) ನಲ್ಲಿ 2024 ರ ಏಪ್ರಿಲ್ 25ರಿಂದ 29ರವರೆಗೆ ಆಯೋಜಿಸುತ್ತಿದೆ.
ಮಹಾದೇವ ಶಿವನ ಕಣ್ಣೀರು ಮತ್ತು ಪ್ರಕೃತಿ (ಶಕ್ತಿ/ಪ್ರಕೃತಿ) ಸಮ್ಮಿಳನ ಮಾಯಾ ಮತ್ತು ನಿಗೂಢ ಮೋಡಿ ಮಾಡುವಂತಹ ರುದ್ರಾಕ್ಷಿಯನ್ನು ಸೃಷ್ಟಿಸಿತು. ಸನಾತನ ಕಾಲದಿಂದ ಎಲ್ಲ ಕ್ಷೇತ್ರಗಳ ಜನರು, ಋಷಿಗಳು, ಉದ್ಯಮಿಗಳು ಶಕ್ತಿಗಾಗಿ ಮತ್ತು ಉನ್ನತ ಎತ್ತರಕ್ಕೇರಲು ಈ ದೈವೀಕ ಆಭರಣವನ್ನು ಧರಿಸಿರುತ್ತಾರೆ. ರುದ್ರಾಕ್ಷಿ ಶಕ್ತಿಶಾಲಿ ಮತ್ತು ದೈವೀಕವಾದದ್ದು ಎಂಬುದು ಸಾಮಾನ್ಯ ಜ್ಞಾನ ಮತ್ತು ನಂಬಿಕೆ. ಆದರೆ ಯಾವುದನ್ನು ಧರಿಸಬೇಕು ಮತ್ತು ಹೇಗೆ ಧರಿಸಬೇಕು ಅಲ್ಲದೇ ರುದ್ರಾಕ್ಷಿಯ ಅಧಿಕೃತತೆ ಶಂಕೆ ಕಾಡುತ್ತಿತ್ತು.
ರುದ್ರಲೈಫ್ ಹಲವಾರು ಶಂಕೆಗಳಿಗೆ ಉತ್ತರವನ್ನು ನೀಡಲು ಸ್ಥಾಪನೆಯಾಗಿದ್ದು ಅಧಿಕೃತ ರುದ್ರಾಕ್ಷದ ವಿಷಯದಲ್ಲಿ ಅತ್ಯಂತ ನಂಬಿಕಾರ್ಹ ಹೆಸರಾಗಿದೆ. ವರ್ಷಗಳ ಸಂಶೋಧನೆಯ ನಂತರ ರುದ್ರಾ ಲೈಫ್ ಜನರ ನೋವು ಮತ್ತು ಕಷ್ಟಗಳನ್ನು ಪರಿಹಾರ ಮಾಡುವುದಕ್ಕಾಗಿ ಹಲವಾರು ಸಮ್ಮಿಶ್ರ ರುದ್ರಾಕ್ಷ ಮಾಲೆಗಳನ್ನು ರೂಪಿಸಿದೆ. ಹಲವಾರು ಕ್ಷೇತ್ರದ ಜನರು ಇದರಿಂದ ಲಾಭ ಪಡೆದಿದ್ದಾರೆ.
ಆದ್ಯ ಪ್ರವರ್ತಕ ರುದ್ರ?ರಾಲೈಫ್ ಅಧಿಕೃತ ಶಕ್ತಿಶಾಲಿ ರುದ್ರಾಕ್ಷದ ವಿಷಯದಲ್ಲಿ ಅತ್ಯಂತ ನಂಬಿಕಾರ್ಹ ಹೆಸರಾಗಿದೆ. ವರ್ಷಗಳ ಸಂಶೋಧನೆಯ ನಂತರ ರುದ್ರಾ ಲೈಫ್ ಜನರ ನೋವು ಮತ್ತು ಕಷ್ಟಗಳನ್ನು ಪರಿಹಾರ ಮಾಡುವುದಕ್ಕಾಗಿ ಹಲವಾರು ಸಮ್ಮಿಶ್ರ ರುದ್ರಾಕ್ಷ ಮಾಲೆಗಳನ್ನು ರೂಪಿಸಿದೆ. 1ರಿಂದ 14 ಮುಖಿವರೆಗಿನ ರುದ್ರಾಕ್ಷಿಗಳು ಇಲ್ಲಿ ಲಭ್ಯ.
ನಿಮ್ಮ ಪ್ರೀತಿಪಾತ್ರರಿಗೆ ರುದ್ರಾಕ್ಷಿಯನ್ನು ಕೊಡುಗೆಯಾಗಿ, ಅಥವಾ ದಾನವಾಗಿ ನೀಡಿರಿ. ರುದ್ರಾಕ್ಷಿ ಧರಿಸಿದವರಿಗೆ ಯಾವುದೇ ಭಯ ಇರುವುದಿಲ್ಲ, ಯಾವುದೇ ಸಂಕಷ್ಟಗಳು ಅವರನ್ನು ಸ್ಪರ್ಷಿಸುವುದಿಲ್ಲ.ರುದ್ರಾಕ್ಷಿ ಧರಿಸುವುದರಿಂದ ಹಲವು ಲಾಭಗಳಿವೆ ಎಂದು ನಂಬಲಾಗಿದೆ. ಸರಸ್ವತಿ ಬಂಧದಿಂದ ವಿದ್ಯಾರ್ಥಿಗಳಿಗೆ ಲಾಭವಿರುತ್ತದೆ. ಸ್ವಾಸ್ಥ್ಯ ಬಂಧದಿಂದ ಆರೋಗ್ಯ ಲಾಭವಿದ್ದರೆ ರಾಹು-ಕೇತುಗಳಿಂದ ಸಂರಕ್ಷಣೆಗೆ ಕಾಲಸರ್ಪದೋಷ ನಿವಾರಕ ನೆರವಾಗುತ್ತದೆ.