ಕುಣಿಗಲ್: ವಿದ್ಯಾರ್ಥಿನಿಯನ್ನು ಮದುವೆ ಮಾಡಿದ್ದಕ್ಕೆ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ಡಿಗೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ತಾಲ್ಲೂಕಿನ ಎಡಿಯೂರು ಹೋಬಳಿ ಸಿಡಿಲುಹಟ್ಟಿ ಗ್ರಾಮದ ವಾಸಿ ಜಿ.ಟಿ.ರಕ್ಷಿತಾ (19) ಮೃತ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ಘಟನೆ ವಿವರ: ರಕ್ಷಿತಾ ಕುಣಿಗಲ್ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಳೆದ ನ.31 ರಂದು ರಕ್ಷಿತಾ ತಾಯಿ ತನ್ನ ತಮ್ಮ ಸಂತೋಷನೊಂದಿಗೆ ರಕ್ಷಿತಾಳನ್ನು ಕೊಟ್ಟು ಮದುವೆ ಮಾಡಿದರು,
ಆದರೆ, ರಕ್ಷಿತಾಳು ನಾನು ಇನ್ನು ಓದಬೇಕಾಗಿತ್ತು, ನನಗೆ ಮದುವೆ ಮಾಡಿದ್ದೀರಾ ಎಂದು ತಿಳಿಸುತ್ತಿದ್ದಳು ಎನ್ನಲಾಗಿದ್ದು, ಮತ್ತೊಂದು ಮಾಹಿತಿ ಪ್ರಕಾರ ರಕ್ಷಿತಾಳು ಆನಾರೋಗ್ಯದಿಂದ ಬಳಲುತ್ತಿದ್ದಳು ಎನ್ನಲಾಗಿದೆ.
ಈ ವಿಚಾರವಾಗಿ ಮಂಗಳವಾರ ರಕ್ಷಿತಾ ಮನೆಯಿಂದ ಹೊರಗೆ ಹೊದವಳು ಮತ್ತೆ ಮನೆಗೆ ವಾಪಸ್ಸ್ ಬರಲಿಲ್ಲ, ಪೋಷಕರು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ, ಬುಧವಾರ ಯಡ್ಡಿಗೆರೆ ಕೆರೆಯಲ್ಲಿ ರಕ್ಷಿತಾಳ ಶವ ಪತ್ತೆಯಾಗಿದೆ. ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.