ಕೋಲಾರ : ಸಂವಿಧಾನವು ಸಂವಿಧಾನವು ನಮಗೆ ಉಚಿತ ಶಿಕ್ಷಣವನ್ನು ಪಡೆಯುವ ಹಕ್ಕನ್ನು ನೀಡಿದೆ. ವಿದ್ಯಾರ್ಥಿಗಳು ಸಂವಿಧಾನದ ಹಕ್ಕನ್ನು ಪಡೆದುಕೊಂಡು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ದೇಶದ ಪ್ರಗತಿಗೆ ಸಹಕಾರಿಗಳಾಗಬೇಕು ಎಂದು ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಷಮ್ಸ್ ಎಂ.ಬಿ ತಿಳಿಸಿದರು.
ಕೋಲಾರ ತಾಲ್ಲೂಕು ಕೆಂದಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯಿಂದ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಿ ನೋಟ್ ಪುಸ್ತಕ ಮತ್ತು ಶಾಲಾಬ್ಯಾಗ್ ವಿತರಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸ್ನೇಹಿತರೆ ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂತು. ಈ ದಿನವನ್ನು ಸಂಭ್ರಮಿಸಲು ನಾವು ಪ್ರತಿ ವರ್ಷ ಈ ದಿನಾಂಕದಂದು ಗಣರಾಜ್ಯೋತ್ಸವವನ್ನು ಆಚರಣೆ ಮಾಡುತ್ತೇವೆ.
ಈ ದಿನಕ್ಕೆ ಅಷ್ಟೊಂದು ಮಹತ್ವ ಏಕೆ ಎಂದರೆ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಶಿಕ್ಷಣ ಹಕ್ಕುಗಳು, 9 ಧಾರ್ಮಿಕ ಹಕ್ಕುಗಳು ಇವೆಲ್ಲವೂ ಸಹ ಸಿಕ್ಕಿದ್ದು. ಇದಕ್ಕಾಗಿ ನಮ್ಮ ಸಂಸ್ಥೆಯ ಎಲ್ಲಾ ಸದಸ್ಯರು ಸೇರಿ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಶಾಲಾಬ್ಯಾಗಿನ ವಿತರಣೆ ಮಾಡುತ್ತಿದ್ದೇವೆ. ನಾವು ಇಷ್ಟಲ್ಲಾ ಸಮಾಜ ಸೇವೆ ಮಾಡಲು ನಮ್ಮ ಸಂಸ್ಥೆಯ ಒಗ್ಗಟ್ಟಿನಿಂದ ಸಾಧ್ಯ ಮಾತ್ರ ಎಂದು ತಿಳಿಸಿದರು.
ಮುಸ್ತಫಾ ಪಾಷ ಎಂ ಪಿ ಕಾರ್ಯದರ್ಶಿ ಮಾತನಾಡಿ ವಿದ್ಯಾರ್ಥಿಗಳು ತಂದೆ ತಾಯಿಗಳಂತೆ ಶಿಕ್ಷಕರಿಗೆ ಗೌರವ ನೀಡಬೇಕು ಇಲ್ಲದಿದ್ದರೆ ಉತ್ತಮ ವ್ಯಕ್ತಿಯಾಗಲು ಸಾಧ್ಯವಿಲ್ಲ. ಪ್ರಪಂಚ ತುಂಬಾ ದೊಡ್ಡದು ನಿಮ್ಮ ಆಸೆಗಳನ್ನು ತೀರಿಸಲು ತುಂಬಾ ಅವಕಾಶಗಳಿವೆ. ಯಾವುದೇ ವಿದ್ಯಾರ್ಥಿಗಳು ತಪ್ಪು ದಾರಿಯಲ್ಲಿ ನಡೆಯಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಅಬ್ಬುಬಕ್ಕರ್, ಶ್ರೀನಾಥ್ ಸಿಎಂ, ವಿನಯ್ ಕುಮಾರ್, ಕೀರ್ತಿ ರತನ್ ಹಾಗೂ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.