ದೊಡ್ಡಬಳ್ಳಾಪುರ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ನಗರದ ಶ್ರೀ ನೆದಾಂಜನೇಯ ಸ್ವಾಮಿ ದೇವಾಲಯದಲ್ಲಿ ಅವರ ಹೆಸರಿನಲ್ಲಿ ಪೂಜೆ ಸಲ್ಲಿಸುವ ಮೂಲಕ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅವರು ತಾಲ್ಲೂಕಿನ ಮುಖಂಡರಗಳೊಂದಿಗೆ ಶುಭಾಶಯಗಳನ್ನ ಕೋರಿದರು.
ನಂತರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಹಣ್ಣು, ಬ್ರೇಡ್ ಹಾಗೂ ಬೆಡ್ ಶೀಟ್ ವಿತರಣೆ ಮಾಡಿದರು.
ಈ ಸಮಯದಲ್ಲಿ ತಾಲ್ಲೂಕಿನ ಹಿರಿಯ ಜೆಡಿಎಸ್ ಮುಖಂಡರುಗಳಾದ ಎ.ನರಸಿಂಹಯ್ಯ, ಹೆಚ್.ಅಪ್ಪಯ್ಯಣ್ಣ, ತ.ನ.ಪ್ರಭುದೇವ್, ನಗರಸಭೆ ಸ್ಥಾಯೀ ಸಮಿತಿ ಅದ್ಯಕ್ಷ ವಿ.ಎಸ್.ರವಿಕುಮಾರ್, ನಗರಸಭಾ ಸದಸ್ಯ ಮಲ್ಲೇಶ್, ತಳವಾರ ನಾಗರಾಜು,ನಾರಾಯಣ್, ಕೇಶವಮೂರ್ತಿ, ತರಿದಾಳ್ ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ತಾಲ್ಲೂಕಿನ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.