ಬೆಂಗಳೂರು: ಬಿಎನ್ಪಿ ಪರಿಬಾಸ್ ತಮ್ಮ ವಾರ್ಷಿಕ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮ – ದಾನ್ ಉತ್ಸವ 2023 ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ವರ್ಷ, ಬಿಎನ್ಪಿ ಪ್ಯಾರಿಬಾಸ್ ಉದ್ಯೋಗಿಗಳು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳ ಮೇಲೆ ಧನಾತ್ಮಕ ಪರಿಣಾಮ ಬೀರುವ ಮತ್ತು ಅವರಿಗೆ ಹೆಚ್ಚು ಉಜ್ವಲ ಹಬ್ಬದ ಋತುವನ್ನು ಖಚಿತಪಡಿಸುವ ಸಲುವಾಗಿ 32,000 ಕಿಲೋಗ್ರಾಂಗಳಿಗೂ ಹೆಚ್ಚು ತೊಗರಿಬೇಳೆ, ಅಕ್ಕಿ ಮತ್ತು ಗೋಧಿಗೆ ಕೊಡುಗೆ ನೀಡಲು ಸ್ವಯಂಪ್ರೇರಣೆಯಿಂದ ಮುಂದೆ ಬಂದರು. ಈ ಚಟುವಟಿಕೆಯನ್ನು ದೇಶದ ಮೂರು ಪ್ರಮುಖ ನಗರಗಳಾದ ಮುಂಬೈ, ಚೆನ್ನೈ ಮತ್ತು ಬೆಂಗಳೂರು ನಗರಗಳಲ್ಲಿ ನಡೆಸಲಾಯಿತು.
ಈ ಉಪಕ್ರಮದ ಭಾಗವಾಗಿ, ಈ ವರ್ಷ ಬಿಎನ್ಪಿ ಪರಿಬಾಸ್ ದಾನ ಮಾಡಿದ ಆಹಾರ ಪದಾರ್ಥಗಳನ್ನು ಪರಿಣಾಮಕಾರಿಯಾಗಿ ವಿತರಿಸಲು ಮತ್ತು ಬಳಸಿಕೊಳ್ಳಲು ಸಹಾಯ ಮಾಡಲು ಆಸೀಮಾ (ಮಹಾರಾಷ್ಟ್ರ) ಅಧಾರ (ಮಹಾರಾಷ್ಟ್ರ) ಬಿಜೆ ಹೋಮ್ಸ್ (ಮಹಾರಾಷ್ಟ್ರ) ಪ್ರೇಮ ವಾಸಂ (ಚೆನ್ನೈ) ರಾಬಿನ್ಹುಡ್ ಆರ್ಮಿ, ಸಮರ್ಥನಂ (ಕರ್ನಾಟಕ) ಮತ್ತು ಉಧಾವುಂ ಉಲ್ಲಂಗಲ್ (ತಮಿಳುನಾಡು) ಮುಂತಾದ ಸಂಸ್ಥೆಗಳೊಂದಿಗೆ ಸಹಭಾಗಿತ್ವದಲ್ಲಿ ಮಾಡಲಾಗಿದೆ.
ಸಮುದಾಯ ಸಂಪರ್ಕದಲ್ಲಿ ತಮ್ಮ ಪರಿಣತಿಯೊಂದಿಗೆ ಈ ಸಂಸ್ಥೆಗಳು, ಬಡತನದ ಅಂಚಿನ ಸಮುದಾಯಗಳ ಮಕ್ಕಳು ಮತ್ತು ವಯಸ್ಕರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.ಕಂಪೆನಿಯ ಸಾಮಾಜಿಕ ಜವಾಬ್ದಾರಿ, ಬ್ರ್ಯಾಂಡ್ ಮತ್ತು ಕಮ್ಯುನಿಕೇಷನ್ಸ್ ಮುಖ್ಯಸ್ಥರಾದ ಮನೀಶಾ ಖೋಸ್ಲಾ ಸಿನ್ಹಾ ಅವರು ಉದ್ಯೋಗಿಗಳ ಭಾಗವಹಿಸುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಯ ಪಾಲುದಾರರಿಗೆ ಕೃತಜ್ಞತೆ ಸಲ್ಲಿಸಿದರು.