ನೆಲಮಂಗಲ: ಶಾಲಾ ವಿದ್ಯಾರ್ಥಿಗಳ ಮತ್ತು ಬಿಸಿಯೂಟ ತಯಾರಿಕಾ ನಿರ್ವಹಣೆ ಮಾಡುವವರಿಗೆ ಏಪ್ರನ್ಗಳನ್ನು ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆಯು ವಿತರಿಸಿರುವುದು ತುಂಬಾ ಸಂತಸದ ವಿಚಾರ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಚ್. ತಿಮ್ಮಯ್ಯ ಅವರು ಹೇಳಿದರು.
ನಗರದ ಕ್ಷೇತ್ರ ಕಾರ್ಯ ನಿರ್ವಹಣಾಧಿಕಾರಿ ಗಳವರ ಕಚೇರಿಯ ಆವರಣದಲ್ಲಿ ನೆಲಮಂಗಲ ರೋಟರಿ ಸಂಸ್ಥೆ ಮತ್ತು ರಾಜಾಜಿನಗರ ಮಾಲಾ ಮತ್ತು ನೆಲಮಂಗಲದ ಔಷಧಿ ವ್ಯಾಪಾರಿಗಳ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಿದ್ದ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮತ್ತು ಬಿಸಿಯೂಟ ತಯಾರಿಸುವ 500 ಮಂದಿಗೆ ರೂ. 210000 ಲಕ್ಷದ ವೆಚ್ಚಗಳಲ್ಲಿ ಉಚಿತವಾಗಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಂತರ ಮಾತನಾಡಿದ ರೋಟರಿ ಸಂಸ್ಥೆಯ ಅಧ್ಯಕ್ಷ ಎಂ.ಟಿ ನವೀನ್ ಕುಮಾರ್ ಅವರು ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳು ತಮ್ಮ ಪಠ್ಯೇತರ ಚಟುವಟಿಕೆಯ ಸಂದರ್ಭ ಆಕಸ್ಮಿಕವಾಗಿ ಗಾಯಗಳಾಗುವುದನ್ನು ಅರಿತು ಅವರಿಗೆ ಪ್ರಥಮ ಚಿಕಿತ್ಸೆಗಾಗಿ ಅಗತ್ಯವಿರುವ ವಸ್ತುಗಳ ಪೆಟ್ಟಿಗೆಯನ್ನು ಹಾಗೂ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಅಕ್ಷರ ದಾಸೋಹ ಅಡಿಯಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರ ಸುರಕ್ಷತೆ ಮತ್ತು ಸ್ವಚ್ಛತೆಗಾಗಿ ಏಪ್ರಾನ್ ಗಳನ್ನು ಉಚಿತವಾಗಿ ಒದಗಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಲ ಸೂರು ರೋಟರಿಯ ಮೋಹನ್ ಕುಮಾರ್, ಸಹಕಾರ ನಗರದ ರೋಟರಿ ಸಂಸ್ಥೆಯ ಜಾನಕಿ ರಾಮ್, ಜಾಲಹಳ್ಳಿ ರೋಟರಿ ಸಂಸ್ಥೆಯ ವಿದ್ಯಾರಣ್ಯಪುರ ಮಧುಸೂಧನ್, ಅಬ್ಬಿಗೆರೆ ದುರ್ಗಾ ಚಾಲನ್ ರೋಟರಿ ಸಂಸ್ಥೆ ಪ್ಲಾಟಿನಂ ಸಿಟಿ ರೂಪ ವೆಂಕಟ್ ,ರೋಟರಿ ಓರಾಯನ್ ಗೇಟ್ವೇ ರಘುನಂದನ್, ರೋಟರಿ ಲೇಕ್ ವರ್ಲ್ಡ್ ದುಬೈದ ರೋಟರಿ ಸೋಂಪುರ ಚೆನ್ನ ತಿಮ್ಮಯ್ಯ, ರೋಟರಿ ಉದ್ಯೋಗ ಪಂಚನಾಥನ್, ರೋಟರಿ ಗೋಕುಲ್ ವಿದ್ಯಾ ಮನೋಜ್ ಕುಮಾರ್, ರೋಟರಿ ರಾಜಾಜಿನಗರ ಮಾಲಾ ಮತ್ತು ನೆಲಮಂಗಲದ ಔಷಧಿ ವ್ಯಾಪಾರಗಳ ಸಂಘದ ಅಧ್ಯಕ್ಷ ವಾದಿರಾಜು ಸೇರಿದಂತೆ ಹಲವಾರು ಪ್ರಮುಖರು ಉಪಸಿತರಿದ್ದರು.