ಚಳ್ಳಕೆರೆ: ತಾಲ್ಲೂಕಿನ ಕಾಡುಗೊಲ್ಲ ಸಮುದಾ ಯದ ಬಹುವರ್ಷಗಳ ಹೋರಾಟದ ಫಲವಾಗಿ. ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣರವರ ಸಮ್ಮುಖದಲ್ಲಿ ಚಳ್ಳಕೆರೆ ಆಡಳಿತದ ವತಿಯಿಂದ ತಾಲೂಕ ಕಛೇರಿ ಸಭಾಂಗಣದಲ್ಲಿ ಅರ್ಹ 9 ಫಲಾನುಭವಿಗಳಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ಚಳ್ಳಕೆರೆ ತಹಸಿಲ್ದಾರ್ ರೆಹಾನ್ ಪಾಷಾ ವಿತರಿಸಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ. ಚಳ್ಳಕೆರೆ ತಹಸೀಲ್ದಾರ್ ರೆಹಾನ್ ಪಾಷ ಇಬ್ಬರು ಶಾಸಕರ ಶಿಫಾರಸ್ಸು ಹಾಗೂ ಸರ್ಕಾರದ ನಿರ್ದೇಶನದಂತೆ. ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡಿದ್ದೇವೆ. ಈ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ. ಈಗಾಗಲೇ ನೇಮಕ ಮಾಡಿರುವ ಅಧಿಕಾರಿಗಳ ಸಮಿತಿಯ ನಿರ್ಣಯದಂತೆ. ತಾಲೂಕಿನಲ್ಲಿರುವ ಗೊಲ್ಲರಟ್ಟಿಗಳಿಗೆ ಭೇಟಿ ನೀಡಿ. ಮಾಜರ್ ನೆಡೆಸಿ. ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿ ಪ್ರತಿ ಅರ್ಜಿ ಸಲ್ಲಿಸಿದಾಗ ಸ್ಥಳ ಮಾಜರ್ ನಡೆಸುವುದಕ್ಕಿಂತ ಮುನ್ನ. ತಾಲೂಕು ವ್ಯಾಪ್ತಿಯಲ್ಲಿ ಬರುವ 139 ಗೊಲ್ಲರಟ್ಟಿಗಳಲ್ಲಿ ಅವರ ಜನಜೀವನ, ಸಂಸ್ಕೃತಿ ಆಚರಣೆ ಪದ್ಧತಿಗಳ ಮಾಹಿತಿಯನ್ನು ಪಡೆದು. ಜಾತಿ ಪ್ರಮಾಣ ಪತ್ರ ನೀಡಬೇಕು.
ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕುವ ಫಲಾನುಭವಿ ಗಳಿಗೆ ಪ್ರಮಾಣ ಪತ್ರ ಕೊಡದೆ ಹಿಂಬರಹವನ್ನು ಕೊಡುವುದನ್ನು ನಿಲ್ಲಿಸಿ. ಪ್ರಮಾಣ ಪತ್ರವನ್ನು ನೀಡಲು ತಾಲ್ಲೂಕು ಆಡಳಿತ ಬದ್ಧವಾಗಿರಬೇಕು ಎಂದರು.ಮೊಳಕಾಲ್ಮುರು ಶಾಸಕ ಎನ್ ವೈ ಗೋಪಾಲಕೃಷ್ಣ ಮಾತನಾಡಿ. ಸಾಂಕೇತಿಕವಾಗಿ 9 ಜನರಿಗೆ ಜಾತಿ ಪ್ರಮಾಣ ಪತ್ರವನ್ನು ಕೊಟ್ಟು.ನಂತರ ಅಧಿಕಾರಿಗಳು ತೊಂದರೆ ಮಾಡಬಾರದು. ಕಾಡು ಗೊಲ್ಲರು ಅವರ ಅಮಾಯಕತನದಿಂದ ಕೆಲವು ಸೌಲಭ್ಯ ವಂಚಿತರಾಗಿದ್ದಾರೆ ಎಂದರು.
ಕಾಡುಗೊಲ್ಲ ಪ್ರಮಾಣ ಪತ್ರವನ್ನು ಪಡೆದು ಸುಮ್ಮನಿದ್ದರೆ ಆಗುವುದಿಲ್ಲ. ಬಿ ಸಿ ಎಂ ಪಟ್ಟಿಗೆ ಸೇರಿಸುವವರೆಗೂ ನಿಮ್ಮ ಹೋರಾಟದ ಪ್ರಯತ್ನ ವಿರಲಿ ಎಂದರು.ತಾಲ್ಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಮಾತನಾಡಿ. ರಾಜ್ಯದ 42 ತಾಲ್ಲೂಕು ಸೀಮಾoಧ್ರದ ರಾಯದುರ್ಗ, ಕಲ್ಯಾಣದುರ್ಗ, ಮಡಕಶಿರಾ ಸೇರಿದಂತೆ ಒಟ್ಟು 11 ಜಿಲ್ಲೆಗಳ ವ್ಯಾಪ್ತಿಯಲ್ಲಿ 12 ಲಕ್ಷ ಕಾಡುಗೊಲ್ಲರು ಇದ್ದಾರೆ. ಕಾಡುಗೊಲ್ಲರನ್ನು ಅಲೆಮಾರಿಗ ಳೆಂದು ಪರಿಗಣಿಸಿ. ಹಿಂದುಳಿದ ವರ್ಗದ ಮೀಸಲಾತಿಯನ್ನು ಸರ್ಕಾರ ಕೊಡಬೇಕೆಂದು ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ಪರಶಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಲರಾಜ್, ರವಿಕುಮಾರ್, ಕಾಡುಗೊಲ್ಲ ಸಮುದಾಯದ ಮುಖಂಡರಾದ ಬಿ.ವಿ.ಸಿರಿಯಪ್ಪ, ಶಿವಮೂರ್ತಿ, ಜಿ.ಕೆ.ವೀರಣ್ಣ, ವೀರೇಶ್, ಮಂಜುನಾಥ, ನಾಗರಾಜು, ಮಹೇಶ್, ಕರಿಯಣ್ಣ ಇತರರು ಉಪಸ್ಥಿತರಿದ್ದರು.