ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ವರ್ಷಪೂರ್ತಿ ಓದಿರುವುದನ್ನೇ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಭಯ, ಆತಂಕ, ಉದ್ವೇಗಕ್ಕೆ ಒಳಗಾಗಬೇಡಿ ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಘಟಕದ ಅಧ್ಯಕ್ಷ ರ. ನರಸಿಂಹ ಮೂರ್ತಿ ಕಿವಿಮಾತು ಹೇಳಿದರು.
ಬಸವೇಶ್ವರನಗರ ಕಾಮಾಕ್ಷಿಪಾಳ್ಯ ರಲ್ಲಿರುವ ಚೈತ್ರ ಸಂದೇಶ್ ಸ್ಟಡಿ ಸೆಂಟರ್ನಲ್ಲಿ ಅಪ್ಪು ಯುವ ಬ್ರಿಗೇಡ್ ಮತ್ತು ಕಸ್ತೂರಿ ಕನ್ನಡ ಡಾ ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಶಾರದ ಪೂಜಾ ಕಾರ್ಯಕ್ರಮ ಮತ್ತು ಎಸ್ಸೆಸ್ಸೆಲ್ಸಿ ಮಕ್ಕಳ ಬೀಳ್ಕೊಡುಗೆ, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ಲಾಸ್ಟಿಕ್ ಪಾರದರ್ಶಕ ಪರೀಕ್ಷೆ ಪ್ಯಾಡ್ ಮತ್ತು ಶೈಕ್ಷಣಿಕ ಸಾಧನಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನೋತ್ಸವದ ಸವಿನೆನಪಿನಲ್ಲಿ ಅಪ್ಪು ಯುವ ಬ್ರಿಗೇಡ್ ನ ರಾಜ್ಯಾಧ್ಯಕ್ಷರಾದ ಮುರಳಿ ರವರ ಸಹಕಾರದಿಂದ ಕಸ್ತೂರಿ ಕನ್ನಡ ಡಾ.ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ವತಿಯಿಂದ ಪ್ಲಾಸ್ಟಿಕ್ ಪಾರದರ್ಶಕ ಪರೀಕ್ಷೆ ಪ್ಯಾಡ್ ಸ್ಟ್ರಾಂಗ್ ರೈಟಿಂಗ್ ಬೋರ್ಡ್ ಪರೀಕ್ಷೆ ಬರೆಯುವ ಪ್ಯಾಡ್ಗಳನ್ನು ಮತ್ತು ಪರೀಕ್ಷಾ ಸಾಧನಗಳನ್ನು ಉಚಿತ ಕೊಡುಗೆಯಾಗಿ ಮಕ್ಕಳಿಗೆ ವಿತರಿಸುವ ಮೂಲಕ ಶುಭ ಕೋರಿದರು.
ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ತಮ್ಮ ಮನಸ್ಸಿನಲ್ಲಿರುವಂತಹ ಭಯ ಮತ್ತು ಆತಂಕವನ್ನು ಬದಿಗಿಟ್ಟು, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂದು ಮಕ್ಕಳಿಗೆ ಧೈರ್ಯ ತುಂಬಿದರು.ವಿವೇಕ ಚೇತನ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ರವಿದಾಸ್ ಬಿಂಡಿಗನವಿಲೆ ಮಾತನಾಡಿ, ಸಮಾಜಮುಖಿ ಕೆಲಸಗಳಿಂದ ಇಡೀ ಭಾರತದಾದ್ಯಂತ ಮನೆಮಾತಾಗಿರುವ ಕರುನಾಡಿನ ಭಾಗ್ಯವಂತ ಪ್ರೀತಿಯ ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ ಅಪ್ಪು ಯುವ ಬ್ರಿಗೇಡ್ ಮತ್ತು ಕಸ್ತೂರಿ ಕನ್ನಡ ಡಾ ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಸಹಭಾಗಿತ್ವದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಉಪಕರಣಗಳನ್ನು ನೀಡುವ ಸೇವೆ ಮಾಡುತ್ತಿರುವ ರಾಜ್ಯಾಧ್ಯಕ್ಷರಾದ ಮುರಳಿ ರವರಿಗೆ ಮತ್ತು ಅವರ ತಂಡಕ್ಕೆ ಹಾಗೂ ವಿಶೇಷವಾಗಿ ವರ್ಷ ಪೂರ್ತಿ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಸದ್ದಿಲ್ಲದೆ ಸಮಾಜ ಸೇವೆ ಮಾಡುವ ರ. ನರಸಿಂಹಮೂರ್ತಿ ರವರಿಗೆ ವಿಶೇಷವಾಗಿ ಧನ್ಯವಾದಗಳನ್ನು ತಿಳಿಸಿದರು.
ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಎಂದರು. ಕಾರ್ಯಕ್ರಮದಲ್ಲಿ ಚೈತ್ರ ಸಂದೇಶ್ ಸ್ಟಡಿ ಸೆಂಟರ್ ನ ಅಧ್ಯಕ್ಷ ಸಂದೇಶ್ ಮಾತನಾಡಿ ಅಪ್ಪು ಅವರಂತೆ ಅವರ ಮಾಡುತ್ತಿದ್ದ ಸಮಾಜಮುಖಿ ಕೆಲಸಗಳನ್ನು ರಾಜ್ಯಾಧ್ಯಂತ ಮುಂದುವರೆಸುತ್ತಿರುವ ಅಪ್ಪು ಯೂತ್ ಬ್ರಿಗೇಡ್ ನ ರಾಜ್ಯಾಧ್ಯಕ್ಷರಾದ ಮುರಳಿ ರವರು ಮತ್ತು ಅವರ ಇಡೀ ತಂಡಕ್ಕೆ ಚಾಮುಂಡೇಶ್ವರಿ ತಾಯಿ ಹೆಚ್ಚಿನ ಶಕ್ತಿಯನ್ನು ದಯಪಾಲಿಸಲಿ ಎಂದು ಶುಭ ಹಾರೈಸಿದರು. ಈ ವೇಳೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಸೇರಿದಂತೆ ಮತ್ತಿತರರು ಹಾಜರಿದ್ದರು.