ಕೆಂಗೇರಿ: ಕಿರಣ್ ಮಜುದ್ದಾರ್ ಷಾ ಬಿ ಪ್ಯಾಕ್ ಮತ್ತು ಬಯೋಕಾನ್ ಸಂಸ್ಥೆ ಮುಖ್ಯಸ್ಥರು ಇವರ ಸಹಯೋಗದೊಂದಿಗೆ ಕೊಡ ಮಾಡುವ ಸಾಮಾಜಿಕ ಸೇವಾ ಕಾರ್ಯದಲ್ಲಿ ಕೆಂಗೇರಿಯ ಬಿ ಪ್ಯಾಕ್ ನಾಗರೀಕ ನಾಯಕ ಶ್ರೀ ಮತಿ ರೂಪಾ ನಾಗರಾಜ್ ನೇತೃತ್ವದಲ್ಲಿ ಕೆಂಗೇರಿ ಇಂದಿರಾಗಾAಧಿ ಕ್ಯಾಟೀನ್ ಪಕ್ಕದಲ್ಲಿ ಕೆಂಗೇರಿಯ ಪೌರಕಾರ್ಮಿಕರಿಗೆ ಸಿಹಿಯನ್ನು ವಿತರಿಸಿದರು.
ನಂತರ ಮಾತನಾಡಿದ ರೂಪಾ ನಾಗರಾಜ್ ರವರು ಪ್ರತಿವರ್ಷದಂತೆ ಈ ವರ್ಷವು ಸಹ ಪೌರಾಕಾರ್ಮಿಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿಯನ್ನು ವಿತರಿಸಲಾಗುತ್ತಿದೆ ಶ್ರೀಮತಿ ಕಿರಣ್ ಮಜುದ್ದಾರ್ ಬಿ ಪ್ಯಾಕ್ ಮತ್ತು ಬಯೋಕಾನ್ ಸಂಸ್ಥೆ ಮುಖ್ಯಸ್ಥರು ಇವರು ಸಾಮಾಜಿಕ ಸೇವಾ ಕ್ಷೇತ್ರದ ಭಾಗವಾಗಿ ಪ್ರತಿವರ್ಷವೂ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಅದರ ಭಾಗವಾಗಿ ಕಳೆದ ಹಲವಾರು ವರ್ಷಗಳಿಂದ ಬಿ ಪ್ಯಾಕ್ ನಾಗರೀಕ ನಾಯಕ ಎಂಬ ಹೆಸರಿನಲ್ಲಿ ದಿನ ನಿತ್ಯ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸುವ ಮೂಲಕ ನಿರಂತರ ಕೆಲಸವನ್ನು ಮಾಡುತ್ತಿರುವವರನ್ನು ಗೌರವಿಸುವುದು.
ನಮ್ಮ ಕರ್ತವ್ಯ ಅದನ್ನು ಪ್ರಾಮಾಣಿಕವಾಗಿ ನಮ್ಮ ಕೆಂಗೇರಿ ವ್ಯಾಪ್ತಿಯಲ್ಲಿ ಪೌರಾಕಾರ್ಮಿಕರಿಗೆ ಸಿಹಿಯನ್ನು ವಿತರಿಸುವ ಮೂಲಕ ಆಚರಿಸಲಾಗುತ್ತಿದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಪೌರಾ ಕಾರ್ಮಿಕರಿಗೆ ಬೇಕಾದ ನೆರವನ್ನು ಬಿ ಪ್ಯಾಕ್ ಸಂಸ್ಥೆಯ ಮೂಲಕ ಮಾಡಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಸ ಸಂಸ್ಕಾರಣ ಘಟ್ಟಕದ ಎ ಇ ಇ ಸಿದ್ದರಾಜೇ ಗೌಡ ಅರೋಗ್ಯ ನಿರೀಕ್ಷಿಕ ರವಿಚಂದ್ರಚಾರಿ ಟಿ ಕೆ ಸಹಾಯಕ ಅರೋಗ್ಯ ನಿರೀಕ್ಷಿಕ ನವೀನ್ ಸೇರಿದಂತೆ ಹಲವಾರು ಪೌರಾಕಾರ್ಮಿಕರು ಉಪಸ್ಥಿತರಿದ್ದರು.