ಬಂಗಾರಪೇಟೆ: ಸಾರ್ವಜನಿಕ ವೃತ್ತಿ ಜೀವನದಲ್ಲಿ ರಾಜಕಾರಣ ಒಂದು ಭಾಗವೇ ಹೊರತು ಕುತಂತ್ರಕ್ಕೆ ಕಾರಣವಾಗಬಾರದು ಪ್ರಸ್ತುತ ದಿನಗಳಲ್ಲಿ ಕ್ಷೇತ್ರ ಅತ್ಯಂತ ಕುತಂತ್ರ ರಾಜಕಾರಣ ತಾಂಡವಾಡುತ್ತಿದೆ ಇದನ್ನು ತಡೆಗಟ್ಟಿ ಬಡವರ ಶ್ರಮಿಕರ ಕೂಲಿ ಕಾರ್ಮಿಕರ ರೈತರ ದಲಿತರ ಭವಿಷ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷ ಬದ್ಧವಾಗಿದೆ ಎಂದು ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಪಿವಿಸಿ ಮಣಿ
ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಗೊಳಿಸಿ ಪಕ್ಷದ ಚಿನ್ಹೆ ಇರುವ ಟೀ ಶರ್ಟ್ ಗಳನ್ನ ಬಿಡುಗಡೆ ಮಾಡಿ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದವರು
ರಾಜ್ಯ ಅಧ್ಯಕ್ಷರಾದ ಅಭಿಮನ್ಯು ಮಣಿ ಅವರ ನೇತೃತ್ವದಲ್ಲಿ ಪಕ್ಷವು ಬಲಿಷ್ಠವಾಗಿ ಸಂಘಟನೆಯಾಗುತ್ತಿದೆ ಮುಂಬರುವAತಹ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುವ ನಿಟ್ಟಿನಲ್ಲಿ ಕಾರ್ಯಕರ್ತರು ಮುಖಂಡರು ಸಜ್ಜಾಗಿರುವುದು ಸಂತಸ ತಂದಿದೆ ಎಂದರು
ಆಸರಿಗೆ ನೇರವಾದ ಊರುಗೋಲು: ಇಂದಿಗೂ ಸಹ ರಾಜ್ಯದಲ್ಲಿ ಬಡತನ ಅಸಹಾಯಕತೆ ರುದ್ರ ನರ್ತನ ಮಾಡುತ್ತಿದೆ ಜನರ ರಕ್ಷಣೆ ಮಾಡಬೇಕಾದಂತ ಜನಪ್ರತಿನಿಧಿಗಳು ಅಧಿಕಾರದ ಅಮಲಿನಲ್ಲಿ ಮುಳುಗಿ ನಿದ್ರೆಗೆ ಜಾರಿದ್ದಾರೆ ಆದಕಾರಣ ನೊಂದವರಿಗೆ ನ್ಯಾಯ ಒದಗಿಸಿ ಆಸರೆ ಇಲ್ಲದವರಿಗೆ ಆಸರೆಯಾಗಿ ನಿಲ್ಲುವ ನಿಟ್ಟಿನಲ್ಲಿ ನಮ್ಮ ಪಕ್ಷದ ಚಿಹ್ನೆ ಸಮರ್ಪಕವಾಗಿದೆ ಎಂದು ಈ ಮೂಲಕ ತಿಳಿಯಪಡಿಸುತ್ತಿದ್ದೇನೆ ಎಂದರು.
2028 ಚುನಾವಣೆಗೆ ಪ್ರಬಲ ಅಭ್ಯರ್ಥಿಯಾಗಿ ಅಭಿಮನ್ಯು ಮಣಿ: ಕರ್ನಾಟಕ ರಿಪಬ್ಲಿಕನ್ ಸಂಘಟನೆ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ ಮಾತನಾಡಿ 2028ರ ವಿಧಾನಸಭಾ ಚುನಾವಣೆ ಪಕ್ಷಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಸೋಹೈಲ್ ದೇವ್ ಭಾರತೀಯ ಸಮಾಜ ಪಕ್ಷ ಕ್ರಿಯಾತ್ಮಕವಾಗಿ ಸಂಘಟನೆ ಆಗುತ್ತಿದೆ ಪ್ರಸ್ತುತ ರಾಜ್ಯ ಅಧ್ಯಕ್ಷರಾದ ಅಭಿಮನ್ಯು ಮಣಿ ರವರು ಅಭ್ಯರ್ಥಿಯಾಗಿ ನೇಮಕ ಮಾಡಿದ್ದು ಪ್ರಬಲ ಪಕ್ಷಗಳಿಗೆ ಸೆಡ್ಡು ಹೊಡೆಯಲು ಸಿದ್ದರಾಗಿದ್ದಾರೆ ಎಂದರು.
ಅನೇಕ ಸಂಘಟನೆಗಳ ಬೆಂಬಲ: ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರ ವಾಗಿದ್ದು ಸಂಘಟನೆಗಳ ಸಂಘಟನೆಗಳು ಪ್ರಮುಖ ಪಾತ್ರ ವಹಿಸಲಿದೆ ಈಗಾಗಲೇ ಅನೇಕ ಸಂಘಟನೆಗಳು ಭಾರತೀಯ ಸಮಾಜ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿರುವುದು ಇನ್ನಷ್ಟು ಶಕ್ತಿ ತುಂಬುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಿಪಬ್ಲಿಕನ್ ಸಂಘಟನೆ ರಾಜ್ಯಾಧ್ಯಕ್ಷ ಬನಹಳ್ಳಿ ಚಿಕ್ಕನಾರಾಯಣ, ಕರ್ನಾಟಕ ದಮನಿತರ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕದಿರೇನಹಳ್ಳಿ ಕುಮಾರ್, ನವೀನ್ಪ ಕುಮಾರ್ಕ್ಷ,ದ ಮುಖಂಡರಾದ ವೆಂಕಟಮುನಿಯಪ್ಪ (ಕೋಲಾರಪ್ಪ ) ಮಾಗೊಂದಿ ನಾರಾಯಣ ಸ್ವಾಮಿ,ಹುದುಕುಳ ದುರ್ಗ,ಕುಂಬಾರ ಪಾಳ್ಯ ಗೋವಿಂದ,ಕುAದರಸನಹಳ್ಳಿ ಮಲ್ಲಿಕಾ, ಮನಿಯಮ್ಮ, ಆಂಧ್ರ ಪ್ರದೇಶದ ಮದು, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದಿಂದ ಟೀ ಶರ್ಟ್ಗಳ ವಿತರಣೆ



