ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ನಲ್ಲಿ ಎಡಗೈ ಸಮುದಾಯಕ್ಕೆ ಸ್ಥಾನ ನೀಡುವುದಾದರೆ ಚಿತ್ರ ದುರ್ಗದ ಜಿ.ಎಸ್. ಮಂಜುನಾಥ್ ರವನ್ನು ಪರಿಗಣಿಸು ವಂತೆ ಕಾಂಗ್ರೆಸ್ ಮುಖಂಡರನ್ನು ಚಿತ್ರದುರ್ಗ ಎಸ್ಸಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಎಸ್.ಜಯ್ಯಣ್ಣ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು. ಕಾಂಗ್ರೆಸ್ನಲ್ಲಿ ಹಲವಾ ರು ವರ್ಷಗಳ ಕಾಲ ಉತ್ತಮವಾದ ಸಂಘಟನೆಯನ್ನು ಮಾಡಿರುವ, ಜಿ.ಎಸ್.ಮಂಜುನಾಥ್ರವರನ್ನು.ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರೆ,ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೆ,ರಾಜ್ಯದಲ್ಲಿ ದಲಿತರ ಧ್ವನಿಯಾಗಿ ಕೆಲಸ ಮಾಡುವರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಇವರ ಸಾಮರ್ಥ್ಯವನ್ನು ಗುರುತಿಸಿ.ರಾಜ್ಯ ಆಸಂಘಟಿತ ಕಾರ್ಮಿಕ ವಿಭಾಗಕ್ಕೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವು ದರ ಮೂಲಕ ರಾಜ್ಯದಲ್ಲಿ ಎಡಗೈ ಸಮುದಾಯ ವಾದ ಮಾದಿಗ ಸಮಾಜವನ್ನು ಗುರುತಿಸ ಬೇಕಿದೆ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಎನ್ .ಡಿ.ಕುಮಾರ್ ಮಾತನಾಡಿ, ಜಿ.ಎಸ್.ಮಂಜುನಾಥ್ ರವರು ಹಲವಾರು ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಸಕ್ರಿ ಯವಾಗಿ ಕಾರ್ಯಕರ್ತರಾಗಿ ಸೇವೆಯನ್ನು ಮಾಡಿದ್ದಾರೆ. ಅಲ್ಲದೆ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನುನಿರ್ವಹಿಸಿ.ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿ ದ್ದಾರೆ.ಇವರು ಪದವೀಧರರಾಗಿದ್ದು, ಪರಿಶಿಷ್ಟ ಜಾತಿಯ ಮಾದಿ ಗಸಮುದಾಯದವರಾಗಿದ್ದಾರೆ.
ವಿದ್ಯಾರ್ಥಿ ಕಾಂಗ್ರೆಸ್,ಯುವ ಕಾಂಗ್ರೆಸ್ ಮುಖಾಂತರ ಸುಮಾರು ಕಳೆದ 36 ವರ್ಷಗಳಿಂದಲೂ ಕಾಂಗ್ರೆಸ್ನಲ್ಲಿ ಸಕ್ರಿಯ ವಾಗಿ ಇದ್ದಾರೆ.ಎಲ್ಲಾ ಸಮಾಜದವರನ್ನು ಒಟ್ಟಿಗೆ ಕರೆದು ಕೊಂಡು ಹೋಗುವ ಶಕ್ತಿ ಇವರಿಗಿದೆ ಎಂದರು.ಈ ಸುದ್ದಿ ಗೋಷ್ಟಿಯಲ್ಲಿ ಚಿತ್ರದುರ್ಗ ಜಿಲ್ಲಾ ಅಸಂಘ ಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಓಹನ್ ಪೂಜಾರಿ,ರವಿಕುಮಾರ್, ಅಶೋಕ್ ನಾಯ್ಡು, ಅಶ್ವಿನ್ ಕುಮಾರ್, ಸುನಿಲ್ ಉಪಸ್ಥಿತರಿದ್ದರು.