ದೇವನಹಳ್ಳಿ: ಇಂದಿನ ಯುವಜನತೆಗೆ ಬುದ್ಧ, ಬಸವ, ಅಂಬೇಡ್ಕರ್ರವರ ಆಶಯಗಳು ಸ್ಪೂರ್ತಿಯಾಗಿಅವರ ಆದರ್ಶಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ಹೇಳಿದರು.
ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯವರ ವತಿಯಿಂದ ಸಂವಿಧಾನ ರಕ್ಷಣೆಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಶೋಷಿತ ಸಮುದಾಯಗಳ ಬೆಳವಣಿಗೆಗಾಗಿ ನಾವೆಲ್ಲರೂ ಹೋರಾಟ ಮಾಡಬೇಕು, ಸಂವಿಧಾನದ ರಕ್ಷಣೆ ನಮ್ಮ ಹೊಣೆಯಾಗಿದೆ .ದೇವನಹಳ್ಳಿಯ ಎಲ್ಲಾ ವರ್ಗದವರಿಗೂ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಹಾಗೇ ಹೆಣ್ಣು ಮಕ್ಕಳಿಗೆ ಅನುಕೂಲವಾಗುಲು ವಸತಿ ಶಾಲೆ ಗಳನ್ನು ನಿರ್ಮಾಣ ಮಾಡಲು ಸರ್ಕಾರದ ಜೊತೆ ಮಾತುಕತೆ ಮಾಡಲಾಗಿದೆ ಎಂದರು.
ದಲಿತ ಸಮುದಾಯದ ಇರಬಹುದು, ವಾಲ್ಮೀಕಿ ಸಮುದಾಯದ ಇರಬಹುದು ಅವರಿಗೆ ಅನುಕೂಲ ವಾಗುವ ಎಲ್ಲಾ ಕಾರ್ಯಗಳನ್ನು ಮಾಡಲು ಬದ್ದರಾಗಿದ್ದೇವೆ ಎಂದರು.
ದೇವನಹಳ್ಳಿ ಯಲ್ಲಿ ಅಂಬೇಡ್ಕರ್ ಭವನ ,ವಾಲ್ಮೀಕಿ ಭವನವನ್ನು ನಿರ್ಮಿಸಿ ಅದರ ಸದುಪಯೋಗ ಪಡೆಯಲು ಅನುವು ಮಾಡಿಕೊಡುತ್ತೇವೆ ಎಂದರುಕಾಂಗ್ರೆಸ್ ಪಕ್ಷಕ್ಕೆ ದಲಿತ ಸಮುದಾಯದ ಕೊಡುಗೆ ಹೆಚ್ಚಾಗಿರುವುದರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದು ನಮ್ಮ ಸರ್ಕಾರ ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುತ್ತದೆ,ಸಂವಿಧಾನ ಎಲ್ಲರನ್ನೂ ಸಮನಾಗಿ ಕಾಣುವಂತೆ ರಚಿಸಲಾಗಿದೆ ಅದನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಿ, ಕಾನೂನಿನ ಹೆಸರಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಸಂವಿಧಾನವನ್ನು ದುರ್ಬಳಕೆ ಮಾಡದಿರಿ ಎಂದು ಸಲಹೆ ನೀಡಿದರು.
ತಾಲೂಕಿನ ಬಾಬು ಜಗಜೀವನ್ ರಾಂ ಮತ್ತು ವಾಲ್ಮೀಕಿ ಭವನ ಶೀಘ್ರದಲ್ಲಿಯೇ ಪೂರ್ಣಗೊಳಿಸುವುದು, ಅಂಬೇಡ್ಕರ್ ಭವನದ ಅಪೂರ್ಣ ಕೆಲಸಗಳನ್ನು ಗಮನಿಸಿ ದುರಸ್ತಿಗೊಳೊಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ ಸಂವಿಧಾನದ ಮೀಸಲಾತಿಗಳು, ತಿದ್ದುಪಡಿ ಮತ್ತು ಕಾನೂನುಗಳು ಎಲ್ಲವೂ ಬಹು ಸಂಖ್ಯಾತರಿಗೆ ಸಂಬಂಧಿಸಿದಾಗಿದೆ, ಶೇಕಡ 3 ರಷ್ಟು ಮಾತ್ರ ಕೆಲವು ಸಮುದಾಯಗಳಿಗೆ ಅನ್ವಯಿಸುತ್ತದೆ ಅದನ್ನು ತಪ್ಪಾಗಿ ಅರ್ಥೈಸಿ ಜನರಲ್ಲಿ ಸಂವಿಧಾನದ ಕುರಿತು ಅಸಮಾಧಾನ ವ್ಯಕ್ತಪಡಿಸುವಂತೆ ಮಾಡುವುದು ಸಮಂಜಸವಲ್ಲ ಎಂದು ಹೇಳಿದರು.
ಸಂವಿಧಾನ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪದವಿಪೂರ್ವ ವಿದ್ಯಾರ್ಥಿಗಳಾದ ಲಾವಣ್ಯ ದೊಡ್ಡಬಳ್ಳಾಪುರ, ಮಮತಾಸ್ ಬೇಗಂ ಪ್ರಗತಿ ಕಾಲೇಜು ವಿಜಯಪುರ,ಪವನ್ ಕುಮಾರ್ ನೆಲಮಂಗಲ ಹಾಗೂ ಪದವಿ ವಿದ್ಯಾರ್ಥಿಗಳಾದ ಸುರೇಶ್ ಹೊಸಕೋಟ ಹೇಮಂತ್ ಕುಮಾರ್ ದೊಡ್ಡಬಳ್ಳಾಪುರ ಚಂದನ ಎಸ್ಎಸ್ ಜೆಸಿ ಕಾಲೇಜು ದೇವನಹಳ್ಳಿ ಇವರಿಗೆ ಪ್ರಶಂಸೆಯ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು.
ರಾಮನಾಥ ಮುನಿರಾಜು ಅವರಿಗೆ ಗೌರವ ಸಲ್ಲಿಸಿ ಅವರ ಕುಟುಂಬಸ್ಥರಿಗೆ ಧನಸಹಾಯವನ್ನು ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ್, ದೇವನಹಳ್ಳಿ ತಾಲೂಕು ತಹಸೀಲ್ದಾರ್ ಶಿವರಾಜ್, ಇಂದಿರಾ ಕೃಷ್ಣಪ್ಪ, ಪೂಜ್ಯ ಮನೋರಕ್ಷತಿ ಬಂತೇಜಿ ಸ್ವಾಮಿ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್, ರಾಜ್ಯ ಸಂಘಟನಾ ಸಂಚಾಲಕರಾದ ಕಾರಳ್ಳಿ ಶ್ರೀನಿವಾಸ್ ಜಿಲ್ಲಾ ಸಂಚಾಲಕರು ಕೊರಳೂರು ಶ್ರೀನಿವಾಸ್, ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ. ತಿಮ್ಮರಾಯಪ್ಪ ಮತ್ತು ತಾಲೂಕು ಸಂಘಟನೆ ಸಂಚಾಲಕ ಅತ್ತಿಬೆಲೆ ನರಸಪ್ಪ, ರಾಜು ಸಣ್ಣಕ್ಕಿ, ಮಾರೇಗೌಡ, ವೆಂಕಟರಮಣಪ್ಪ, ಪ್ರಮೋದ್ ಹಾಗೂ ದಲಿತ ಸಮುದಾಯದ ಮುಖಂಡರು, ವಿದ್ಯಾರ್ಥಿಗಳು, ಕಾರ್ಯಕರ್ತರು, ಸಮುದಾಯದವರು ಉಪಸ್ಥಿತರಿದ್ದರು.