ಹೊಸಕೋಟೆ: ತಾಲೂಕಿನ ಸರಕಾರಿ ಶಿಕ್ಷಕರ ಸಂಸ್ಕøತಿ ಕಲಾ ತಂಡವು ದೊಡ್ಡಬಳ್ಳಾಪುರದಲ್ಲಿ ನಡೆದ ಗ್ರಾಮಾಂತರ ಜಿಲ್ಲಾ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಶಿಕ್ಷಣ, ಆರೋಗ್ಯ, ನ್ಯಾಯಾಂಗ ಇಲಾಖೆಯ ಉದ್ಯೋಗಿಗಳು ಒಳಗೊಂಡ ರಾಜಮ್ಮ ನೇತೃತ್ವದ ತಂಡವು ಪ್ರದರ್ಶಿಸಿದ ಏಕಲವ್ಯ ನಾಟಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ತಂಡದ ಪದಾಧಿಕಾರಿಗಳಾದ ರಾಜಮ್ಮ, ಕರುಣಾ, ಜಯಂತಿ, ಚಂದ್ರು, ವನಿತಾ, ಪುಷ್ಪಾ, ಸಂದ್ಯಾ, ಮಂಜುಳಾ, ಚಂದ್ರಕಲಾ, ಶಿವಶಂಕರೇಗೌಡ, ಶ್ಯಾಮಲ, ನಾಗೇಶ್, ಯಶೋಧಮ್ಮರವರುಗಳನ್ನು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು ಪದಾಧಿಕಾರಿಗಳು ಅಭಿನಂದಿಸಿದ್ದು ರಾಜ್ಯಮಟ್ಟದಲ್ಲೂ ಪ್ರಶಸ್ತಿ ಗಳಿಸಲಿ ಎಂದು ಹಾರೈಸಿದ್ದಾರೆ.
ಕೈಗೆಟುಕುವ ದರದಲ್ಲಿ ಪ್ಯೂರ್ ಇವಿ ಇಕೋಡ್ರಿಫ್ಟ್
Leave a Review