ದೇವನಹಳ್ಳಿ: ಇಂದಿನ ಯುವ ಜನಾಂಗ ಮತ್ತು ವಿದ್ಯಾರ್ಥಿಗಳು ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಕುರಿತು ಎಷ್ಟರಮಟ್ಟಿಗೆ ತಿಳಿದುಕೊಂಡಿದ್ದಾರೆ ಹಾಗೂ ಅವರ ಸಮಾನ ನಿಲುವಿನ ಬಗ್ಗೆ ಕೆಲವರಲ್ಲಿ ಸಂದೇಹಗಳಿದ್ದು ಅದರ ಪರಿಹಾರಕ್ಕೆ ವಿದ್ಯಾರ್ಥಿಗಳು ಸಂವಿಧಾನವನ್ನು ಸಂಪೂರ್ಣವಾಗಿ ಅರಿತುಸಮಾಜದ ಬದಲಾವಣೆಗಳಿಗೆ ಕಾರಣಕರ್ತ ರಾಗಬೇಕು ಎಂಬ ಉದ್ದೇಶದೊಂದಿಗೆ ಈ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಮತ್ತು ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಡಿಸೆಂಬರ್ 17 ಭಾನುವಾರ ಬೆಳಿಗ್ಗೆ 11 ರಿಂದ 12 ಗಂಟೆಗೆ “ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿ ಯುವ ಜನರಿಗಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ” ಆಯೋಜನೆ ಕುರಿತು ಪತ್ರಿಕಾಗೋಷ್ಠಿ ನಡೆಸಿದರು.
ದಸಂಸ ತಾಲೂಕು ಪ್ರಧಾನ ಸಂಚಾಲಕ ಪಿ. ನರಸಪ್ಪ ಮಾತನಾಡಿ ಜಾತಿ ಮತ್ತು ಅಧಿಕಾರಶಾಹಿಯಲ್ಲಿನ ವಿಭಜನೆಯನ್ನು ಎದುರಿಸಲು ದಲಿತರು ಮತ್ತುಅಲ್ಪಸಂಖ್ಯಾತರ ಹಕ್ಕುಗಳನ್ನು ಕಡೆಗಣಿಸದಂತೆ ನೋಡಿಕೊಳ್ಳಲು ಸಂವಿಧಾನವನ್ನು ಉದ್ದೇಶಪೂರ್ವಕವಾಗಿ ಸಮಾಜದ ಪ್ರತಿಯೊಂದರ ಕುರಿತು ಅತ್ಯಂತ ವಿವರ ಮತ್ತು ಸಮಾನವಾಗಿ ರಚಿಸಲಾಗಿದೆ ಆದರೂ ಸಹ ಕೆಲವು ವ್ಯಕ್ಕಿಗಳು ತಪ್ಪಾಗಿ ಅರ್ಥೈಸಿಕೊಂಡು ಸಂವಿಧಾನದ ಕರಡು ರಚನೆಯ ಸಂದರ್ಭವನ್ನು ಎತ್ತಿ ತೋರಿಸಿದರು ಮತ್ತು ಸಂವಿಧಾನದ ಬಗ್ಗೆ ಹಲವಾರು ಆರೋಪಗಳು ಮತ್ತು ತಪ್ಪು ಕಲ್ಪನೆಗಳನ್ನು ಹೊರಹಾಕುತ್ತಿರುತ್ತಾರೆ ಆದ್ದರಿಂದ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ದೇಶದ ಭವಿಷ್ಯತ್ತಿನ ಪ್ರಜೆಗಳಾದ ಯುವಕರು ಹೊಂದಿರುವ ನಿಲುವಿನ ಬಗ್ಗೆ ತಿಳಿಯುವ ಸಲುವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದೇವನಹಳ್ಳಿ, ಹೊಸಕೋಟೆ,ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ನೊಂದಾಯಿತರಿಗೆ ಸ್ಪರ್ಧೆ ನಡೆಯುವ ಸ್ಥಳವನ್ನು ತಿಳಿಸಲಾಗುವುದು ಭಾಗವಹಿಸುವವರು ಕಾಲೇಜು ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು,ಬರಹ ಸ್ಪಷ್ಟ ಮತ್ತು ತೀಕ್ಷ್ಣವಾಗಿರಬೇಕು ವಿಷಯದ ಕುರಿತು ಐದು ಪುಟಗಳು ಮೀರದಂತೆ ಪ್ರಬಂಧ ಬರೆಯಬೇಕು, ಆಸಕ್ತರು ಮೊದಲೇ ಕರೆ ಮಾಡಿ ತಮ್ಮ ಹೆಸರುಗಳನ್ನ ಡಿಸೆಂಬರ್ 15 ಶುಕ್ರವಾರದ ಒಳಗೆ ನೋಂದಾಯಿಸಿಕೊಳ್ಳಬೇಕು,ವಿಜೇತರಿಗೆ ಡಿಸೆಂಬರ್ 27 ರಂದು ನಡೆಯುವ ಜಿಲ್ಲಾ ಸಮ್ಮೇಳನದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು.
ಪ್ರಥಮ ಬಹುಮಾನ 10,000 ದ್ವಿತೀಯ ಬಹುಮಾನ 5,000 ತೃತೀಯ ಬಹುಮಾನ 3,000 ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು ನೋಂದಣಿಗಾಗಿ ಮೊ.ಸಂಖ್ಯೆ:9986355926 ಹಾಗೂ ಹೆಚ್ಚಿನ ಮಾಹಿತಿಗಾಗಿ 9900735150, 9845076730 ಅನ್ನು ಸಂಪರ್ಕಿಸಬಹುದಾಗಿದೆ.
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಬೆಂಗಳೂರುಗ್ರಾಮಾಂತರ ಜಿಲ್ಲಾ ಸಮಿತಿಯ ಸಂಚಾಲಕ
ರಾದ ಎಂ. ತಿಮ್ಮರಾಯಪ್ಪ, ನಾಗನಾಯಕನಹಳ್ಳಿ ರಮೇಶ್, ಜೋಗಹಳ್ಳಿ ನಾರಾಯಣಸ್ವಾಮಿ,ಎಚ್. ವಿ .ವೆಂಕಟೇಶ್, ಹಾರೋಹಳ್ಳಿ ಎಚ್.ಕೆ ವೆಂಕಟೇಶ್, ವೆಂಕಟರಮಣಪ್ಪ, ನಿತಿನ್, ಕೃಷ್ಣಪ್ಪ ನಾಯ್ಕ್, ತ್ರಿಮೂರ್ತಿ, ಚನ್ನ ಕೃಷ್ಣ ಯಲಿಯೂರು ಸೇರಿದಂತೆ ಮತ್ತಿತರರು ಇದ್ದರು.