ಚಿಂತಾಮಣಿ: ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಚಿಕ್ಕಬಳ್ಳಾಪುರ , ತಾಲೂಕು ಪಂಚಾಯತ್ಹಾಗೂ ಕ್ಷೇತ್ರ ಶಿಕ್ಷಣಧಿಕಾರಿಗಳು ಚಿಂತಾಮಣಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದU-೧೪ ಮತ್ತು U-೧೭ ಬಾಲಕ, ಬಾಲಕಿಯರ ಕಬಡ್ಡಿ ಹಾಗೂ ಥ್ರೋ ಬಾಲ್ ಕ್ರೀಡಾಕೂಡಗಳನ್ನು ಚಿಂತಾಮಣಿ ನಗರದ ಝಾನ್ಸಿ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಶಿಕ್ಷಣಧಿಕಾರಿಗಳಾದ ಉಮಾದೇವಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಜಿಲ್ಲೆಯಿಂದ ಪ್ರತಿಭವಂತ ಕ್ರೀಡಾಪಟುಗಳನ್ನು ಹೊಂದಿರುವ ಬಲಿಷ್ಠ ತಂಡಗಳನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಿ ಮತ್ತು ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ನಿಷ್ಪಕ್ಷವಾದ ನಿರ್ಣಯ ನೀಡುವಂತೆ
ನಿರ್ಣಾಯಕರಿಗೆ ಸಲಹೆ ನೀಡಿದರು. ದೈಹಿಕ ಶಿಕ್ಷಕರ ರಾಜ್ಯ ಸಂಘದ ಖಜಾಂಚಿ ಬಾಲರಾಜ್ ಮಾತನಾಡಿ ಆಟವನ್ನು ಕ್ರೀಡಾ ಸ್ಫೂರ್ತಿಯಿಂದ ಆಡಬೇಕು. ಗ್ರೀಕರು ಕಠಿಣ ಅಭ್ಯಾಸದಿಂದ ಕ್ರೀಡೆಯಲ್ಲಿ ಸಾಧನೆ ಮಾಡುತ್ತಾರೆ ಅವರಂತೆ ನೀವು ಕೂಡ ಕಠಿಣ ಅಭ್ಯಾಸ ಮತ್ತು ಪರಿಶ್ರಮದಿಂದ ಕ್ರೀಡೆಯಲ್ಲಿ ಸಾಧನೆ ಮಾಡಿ ಎಂದು ಹೇಳಿದರು.
ಕ್ರೀಡಾಕೂಟದ ಆಯೋಜಕರಾದ ಟಿ ಪಿ ಓ ನರಸಿಂಹಪ್ಪ ಸ್ವಾಗತ ಭಾಷಣ ಮಾಡಿದರು. ಒಲಿಪಿಂಕ್ ಧ್ವಜಾರೋಹಣ ಮಾಡಲಾಯಿತು. ಆರು ತಾಲೂಕಿನಿಂದ ಬಂದ ಕ್ರೀಡಾಪಟುಗಳನ್ನು ಅತಿಥಿಗಳು ಪರಿಚಯ ಮಾಡಿಕೊಂಡರು. ಚಿಂತಾಮಣಿ ರಾಷ್ಟಿçÃಯ ಕ್ರೀಡಾಪಟು ಸಿದ್ದಪ್ಪ ಮತ್ತು ಕ್ರೀಡಾಪಟುಗಳಿಗೆ ಉಪಹಾರ ವ್ಯವಸ್ಥೆ ಮಾಡಿದ ಬಾಬು ಅವರಿಗೆ ಸನ್ಮಾನ ಮಾಡಲಾಯಿತು. U-೧೭ ಕಬಡ್ಡಿಯಲ್ಲಿ ಚಿಂತಾಮಣಿ ಆದರ್ಶ ಶಾಲೆ, ಬಾಲಕಿಯರು ಚೀಲಕಲನೇರ್ಪು ಬಾಲಕರ ತಂಡ U-೧೪ ಕಬಡ್ಡಿಯಲ್ಲಿ ಗೌರಿಬಿದನೂರು ಬಾಲಕರ ತಂಡ ಗುಡಿಬAಡೆ ಬಾಲಕಿಯತಂಡ ವಿಜೇತರಾಗಿ
ವಿಭಾಗ ಮಟ್ಟಕ್ಕೆ ಆಯ್ಕೆಯಾದರು.
ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮಾರುತಿ, ರಮೇಶ, ವಿಜಿಕುಮಾರ, ರಂಗನಾಥ್, ಸುರೇಶ ಬಾಬು, ಉಷಾ, ಶ್ರೀಧರ್ ಹಿರೇಮಠ, ಪುನೀತ್ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಪರಮೇಶ್ವರ್, ಉಪೇಂದ್ರ, ಗಿರೀಶ್, ನಾಗೇಶ್, ಶ್ರೀಕಾಂತ್, ಮAಜುನಾಥ್, ವೇಣು, ಕಾರ್ಯನಿರ್ವಹಿಸಿದರು