ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟ್ ಆದೇಶದನ್ವಯ ಖಾಸಗಿ ಶಾಲೆಯಲ್ಲಿ ಸಂಗ್ರಹಿಸುತ್ತಿರುವ ಇತಿಮಿತಿಯಿಲ್ಲದ ಶುಲ್ಕ ನೀತಿಗೆ ಕಡಿವಾಣ ಹಾಕಿ, ನಿಯಂತ್ರಣ ಪ್ರಾಧಿಕಾರ ರಚಿಸಿ ಆ ಪ್ರಾದಿಕಾರದಲ್ಲಿ ಪೋಷಕರು, ಶಿಕ್ಷಣ ತಜ್ಞರನ್ನ ಸೇರಿಸಿ ಎಂದು ಹೇಳಿದೆ ಈ ಆದೇಶವನ್ನ ದೆಹಲಿ ಸರ್ಕಾರ ಬಿಟ್ಟರೆ ಬೇರೆ ಯಾವ ರಾಜ್ಯ ಸರ್ಕಾರಗಳು ಇದನ್ನು ಜಾರಿ ಮಾಡಿಲ್ಲ ರಾಜ್ಯ ಸರ್ಕಾರ ಕೂಡಲೆ ಶುಲ್ಕ ನಿಯಂತ್ರಣ ಪ್ರಾದಿಕಾರ ರಚಿಸಿ ಖಾಸಗಿ ಶಾಲೆಗಳ ವಸೂಲಿ ದಂದೆಯನ್ನ ನಿಲ್ಲಿಸಿ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬೈರೆಡ್ಡಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನದ
ಆಧಾರದ ಮೇಲೆ ಶಾಲಾ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಿ ಇತಿಮಿತಿ ಇಲ್ಲದೆ ಹೆಚ್ಚಿಸುತ್ತಿರುವ ಡೋನೇಷನ್ ಹಾವಳಿ ನಿಲ್ಲಿಸಿ ಎಂದು ಒತ್ತಾಯಿಸಿದರು.
2022 ರಲ್ಲಿ ಖಾಸಗಿ ಶಾಲೆಗಳು ವಿಧಿಸುವ ಶುಲ್ಕವನ್ನು ನಿಯಂತ್ರಿಸಲು ಮತ್ತು ನಿಯಂತ್ರಿಸಲು ಮೀಸಲಾದ ನಿಯಂತ್ರಣ ಪ್ರಾಧಿಕಾರವನ್ನು ಸ್ಥಾಪಿ ಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ತೀರ್ಪಿನ ನಂತರ ಈ ನಿಯಂತ್ರಕ ಸಂಸ್ಥೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ 6 ತಿಂಗಳ ಕಾಲಾವಧಿಯನ್ನು ನೀಡಿತ್ತು ಕೋರ್ಟ ಆದೇಶದಂತೆ ದೆಹಲಿ ರಾಜ್ಯದಲ್ಲಿ ಶುಲ್ಕವನ್ನು ನಿಯಂತ್ರಿಸುವ ಪ್ರಾಧಿಕಾರ ರಚನೆ ಮಾಡಲಾಗಿದೆ.
ಇದನ್ನು ಹೊರೆತು ಪಡಿಸಿ ಬೇರೆ ಯಾವುದೇ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ ಖಾಸಗಿ ಶಾಲೆಗಳು ಅನಿಯಂತ್ರಿತವಾಗಿ ಶುಲ್ಕವನ್ನು ಹೆಚ್ಚಿಸುವುದನ್ನು ಮತ್ತು ಪೋಷಕರಿಗೆ ಹೊರೆಯಾಗುವುದನ್ನು ತಡೆಯುವುದು ಇದರ ಉದ್ದೇಶವಾ ಗಿದ್ದು. ಸುಪ್ರೀಂ ಕೋರ್ಟ್ನ ಆದೇಶದ ಪ್ರಕಾರ, ನಿಯಂತ್ರಣ ಪ್ರಾಧಿಕಾರವು ಸಮತೋಲನದ ಮೇಲ್ವಿಚಾರಣೆಯನ್ನು ಖಚಿತ ಪಡಿಸಿಕೊಳ್ಳಲು ಸರ್ಕಾರ, ಪೋಷಕರು ಮತ್ತು ಶೈಕ್ಷಣಿಕ ತಜ್ಞರ ಪ್ರಾತಿನಿಧ್ಯವನ್ನು ಹೊಂದಿರಬೇಕು ಎಂದು ತಿಳಿಸಿದೆ.
ಆದರೆ ಈ ಆದೇಶ ಜಾರಿ ಮಾಡದೆ ನಿರ್ಲಕ್ಷ ವಹಿಸಿರುವ ರಾಜ್ಯ ಸರ್ಕಾರ ಕೂಡಲೆ ಪ್ರಧಿಕಾರ ರಚನೆ ಮಾಡಿ ಬಡವರ,ಮದ್ಯಮ ವರ್ಗದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಲು ಅವಕಾಶ ಮಾಡಿಕೊಡಬೇಕು ಇಲ್ಲವಾದಲ್ಲಿ ಎಎಪಿ ಪಕ್ಷದಿಂದ ಆಂದೋಲನ ಪ್ರಾರಂಬಿಸಲಾಗುತ್ತದೆಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೀಪ ಕ್ರಾವ್, ಕಾರ್ಯದರ್ಶಿ ಸೈಯದ್ ನಾಸೀರ್ ಆಲಿ, ಅಬ್ಬಾಸ್, ವಿ. ಅಶೋಕ್,ಷoಶು ಇದ್ದರು. ನಂತರ ಜಿಲ್ಲಾಧಿಕಾರಿ ರವರಿಗೆ ಮನವಿ ಸಲ್ಲಿಸಿದರು.