This is the title of the web page
This is the title of the web page

ಬಿಜೆಪಿ ಪಕ್ಷದ ಜಿಲ್ಲಾ ಎಸ್‍ಸಿ ಮೋರ್ಚಾ ಸಮಾವೇಶ

ದೇವನಹಳ್ಳಿ: ಬಿಜೆಪಿ ಪಕ್ಷವು ಯಾವುದೇ ರೀತಿಯ ಜಾತಿ ಧರ್ಮಕ್ಕೆ ಸೀಮಿತವಾಗದೇ ಜಾತ್ಯತೀತವಾಗಿ ಆಡಳಿತ ನಡೆಸುತ್ತಿದ್ದು ಆದರೆ ಇತರ ಪಕ್ಷಗಳು ಬಿಜೆಪಿಯು ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿದ್ದು ಇದರಿಂದ ದೇಶದ ಪ್ರಗತಿ ಶೂನ್ಯ ಎಂದು ಜನರಲ್ಲಿ ತಪ್ಪುಭಾವನೆ ಮೂಡಿಸುತ್ತಿದ್ದಾರೆ ಅದು ಸತ್ಯಕ್ಕೆ ದೂರವಾದ್ದು ಬಿಜೆಪಿ ಪಕ್ಷಕ್ಕೆ ದೇಶದ ಅಭಿವೃದ್ಧಿಯೇ ಮುಖ್ಯ ಧ್ಯೇಯವಾಗಿದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ದೇವನಹಳ್ಳಿ ತಾಲ್ಲೂಕಿನಲ್ಲಿ. ಬಿಜೆಪಿಯ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್.ಸಿ ಮೋರ್ಚಾದ ಜಿಲ್ಲಾ ಸಮಾವೇಶ ವನ್ನು ಎಸ್ ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ತಲಾ ತಲಾಂತರದಿಂದ ದಲಿತರ ಪರವಾಗಿರುವ ಪಕ್ಷ ಎಂದು ಸುಳ್ಳು ಹೇಳುತ್ತಲೇ ಬಂದಿದೆ ಎಂದು ಆರೋಪಿಸಿದರು. ಬಿಜೆಪಿ ದಲಿತ ವಿರೋಧಿ ಎಂದು ಕಾಂಗ್ರೆಸ್ ಪಕ್ಷ ಗೂಬೆ ಕೂರಿಸುತ್ತಲೇ ಇದೆ. ಆದರೆ, ಜನರಿಗೆ ಈಗ ಸತ್ಯ ಗೊತ್ತಾಗಿದೆ. ಕಾಂಗ್ರೆಸ್ಗೆ ದಲಿತರ ಮೇಲೆ ಇರುವ ಪ್ರೀತಿ ಕೇವಲ ಮೊಸಳೆ ಕಣ್ಣೀರು ಅಷ್ಟೇ ಎಂದು ತಿಳಿಸಿದರು. ದೇಶದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿರುವುದು ತಾನೇ ಎಂದು ಕೊಂಡು ಕಾಂಗ್ರೆಸ್ ಪಕ್ಷ ಬರುತ್ತಿದೆ.

ಆದರೆ ಮೀಸಲಾತಿ ಜಾರಿಯಾಗಿದ್ದು ಡಾ.ಬಿ.ಆರ್.ಅಂಬೇಡ್ಕರ್ ರವರ ಹೋರಾಟದ ಫಲದಿಂದಾಗಿ ಎಂದಿದ್ದಾರೆ. ಈಗ ದೇಶದಲ್ಲೇ ಜನರಿಗೆ ಬಿಜೆಪಿಯ ಬಗ್ಗೆ ಒಲವು ಮೂಡಿದೆ ಎಂದು ತಿಳಿಸಿದರು. ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ ಬಿಜೆಪಿ ಪಕ್ಷವನ್ನುಬೂತ್ ಮಟ್ಟದಲ್ಲಿ ಎಲ್ಲರೂ ಒಗ್ಗೂಡಿ ಸಂಘಟಿಸುವಂತಾಗಬೇಕು,ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಗೆಲುವು ನಮ್ಮೆಲ್ಲರ ಗುರಿಯಾಗಬೇಕೆಂದು ಹೇಳಿದರು.

ಮಾಜಿ ಶಾಸಕ ಚಂದ್ರಣ್ಣ ಮಾತನಾಡಿ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಕಾರಣಕ್ಕೆ ಬಿಜೆಪಿ ದಲಿತ ವಿರೋಧಿ ಅಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ, ಹೀಗಾಗಿ ದಲಿತರೆಲ್ಲರೂ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದ್ದು ಈ ಕಾಂಗ್ರೆಸ್ ಪಕ್ಷದವರ ಮಿಥ್ಯದ ಆರೋಪವನ್ನು ಸುಳ್ಳುಗೊಳಿಸಲೆಂದೇ ದಲಿತರನ್ನು ಸಂಘಟನೆ ಮಾಡುವ ಹೊಣೆಯನ್ನು ತಾವು ಹೊತ್ತುಕೊಂಡು ಬಿಜೆಪಿ ಎಲ್ಲ ಸಮುದಾಯಗಳನ್ನು ಸೇರಿಸಿ ಭವ್ಯ ಭಾರತ ನಿರ್ಮಾಣದತ್ತ ಸಾಗುತ್ತಿದೆ ಎಂದರು.

ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ಹಣ ಉಡುಗೊರೆಯ ಆಮಿಶಗಳಿಗೆ ಮಾರು ಹೋಗದೆ ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಕೊಂಡು ಪಕ್ಷವನ್ನು ಬೆಂಬಲಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಎಸ್ ಸಿ ಘಟಕದ ರಾಜ್ಯ ಖಜಾಂಚಿ ಏ.ಕೆ.ಪಿ ನಾಗೇಶ್, ಜಿಲ್ಲಾ ರೈತ ಮೊರ್ಚ ಅಧ್ಯಕ್ಷ ಎಚ್‍ಎಂ ರವಿಕುಮಾರ್. ತಾಲೂಕು ಅಧ್ಯಕ್ಷ ಸುಂದರೇಶ್, ಕನಕರಾಜ್. ಹೆಗಡೆ. ಭಗವಾನ್. ಪ್ರಭು.ದೇವನಹಳ್ಳಿ ಟೌನ್ ಅಧ್ಯಕ್ಷ ಸಂದೀಪ್, ತಾಲೂಕು ಪ್ರಧಾನ ಕಾರ್ಯದರ್ಶಿ ನಿಲೇರಿ ಮಂಜುನಾಥ್ ಸೇರಿದಂತೆ
ಬಿಜೆಪಿಯ ಕಾರ್ಯಕರ್ತರು, ಸದಸ್ಯರು ಉಪಸ್ಥಿತರಿದ್ದರು.