ಬೆಂಗಳೂರು: ಪರಸ್ಪರ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದ ಜೋಡಿಗಳಲ್ಲಿ ವಿಚ್ಛೇದನಗಳು ಇತ್ತೀಚಿಗೆ ಹೆಚ್ಚಾಗುತ್ತಿರುವುದು ಆಂತಕಕಾರಿ ಸಂಗತಿ ಎಂದು ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ ಹೇಳಿದರು.
ಬೆಂಗಳೂರಿನ ನಯನ ಸಭಾಂಗಣದಲ್ಲಿ ಬುಧವಾರ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪತ್ರಕರ್ತ ಲೇಖಕ ಉಜ್ಜಿನಿ ರುದ್ರಪ್ಪರವರು ರಚಿಸಿರುವ ಪ್ರೀತಿಸಿ ಮದುವೆಯಾದ ಜೋಡಿಗಳ ನೈಜ ಘಟನೆಗಳನ್ನ ಒಳಗೊಂಡ ಪ್ರೀತಿಯನ್ನು ಹಂಬಲಿಸಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಪರಸ್ಪರ ಏನಾದರೂ ಸಮಸ್ಯೆಗಳು ಉದ್ಬವಿಸಿದರೆ ಈ ಪುಸ್ತಕವನ್ನು ಓದಿದರೆ ಉತ್ತಮ ಸಂಸಾರ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದರು.ನಾನು ಪಂಜಾಬಿ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಿ 54 ವರ್ಷವಾದರೂ ಇಂದಿಗೂ ಅನೂನ್ಯವಾಗಿದ್ದೇವೆ. ಜೋಡಿಗಳಲ್ಲಿ ನಂಬಿಕೆ ಬಹಳ ಮುಖ್ಯ. ಪ್ರೀತಿ ಎಂದರೆ ಕೇವಲ ದೈಹಿಕ ಸಂಪರ್ಕ ಅಷ್ಟೆ ಅಲ್ಲ ಅದು ಮನಸ್ಸುಗಳ ಬೆಸುಗೆ ಎಂದರು.
ವಿಮರ್ಶಕ ಕವಿ. ಎಲ್.ಎನ್. ಮುಕುಂದರಾಜ್ ಕೃತಿ ಕುರಿತು ಮಾತನಾಡಿ ಪ್ರೀತಿಸಿ ಮದುವೆಯಾಗುವ ಪ್ರಕರಣ ನಿನ್ನೆ ಮೊನ್ನೆಯದಲ್ಲ. ಈ ಜಗತ್ತು ಹುಟ್ಟಿದಾಗಿನಿಂದ ಪ್ರೀತಿ ಹುಟ್ಟಿದೆ. ಭೂಮಿ ಇರುವ ತನಕವೂ ಇರುತ್ತದೆ ಎಂದ ಅವರು ಕೃತಿಯಲ್ಲಿನ ಜೋಡಿಗಳ ಬದುಕಿನ ಘಟನಾವಳಿಗಳನ್ನು ವಿವರಿಸಿದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ ತಾವು ಪ್ರೀತಿಸಿ ಮದುವೆಯಾದ ಪ್ರಸಂಗವನ್ನು ಹೇಳಿದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ. ಚಲನ ಚಿತ್ರನಟ ಚೇತನ್ ಕುಮಾರ್ ಮಾತನಾಡಿದರು. ಪ್ರೀತಿಸಿ ಮದುವೆಯಾದ ಕೊಟ್ಟೂರಿನ ಶೀಥಲ್ ಮೂಕ ಜೋಡಿ ಕೊಟ್ಟೂರಿನ ಅಶ್ವಿನಿ ಮತ್ತು ಈಶ್ವರ 124 ಅಂತರ ಜಾತಿ ಅಂತರ ಧರ್ಮೀಯರ ಮದುವೆ ಮಾಡಿಸಿರುವ ಶೇಕ್ಷಾಖಾದ್ರಿ, ವಾಣಿ ಹಾಗೂ ಬಳ್ಳಾರಿಯ ದೇವೇಂದ್ರ ಸುಧಾ ತಾವು ಪ್ರೀತಿಸಿ ಮದುವೆಯಾದ ಪ್ರಸಂಗಗಳನ್ನು ಸಭೆಗೆ ಮನ ಮುಟ್ಟುವಂತೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಪ್ರಶಸ್ತಿ ಪುರಸ್ಕೃತೆ ಡಾ. ವಸುಂಧರಾ ಭೂಪತಿ ಮಾತನಾಡಿದರು.ಕೃತಿ ರಚನೆಕಾರ ಉಜ್ಜಿನಿ ರುದ್ರಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಭಾರತಿ ಹೆಗಡೆ ನಿರೂಪಿಸಿ ವಂದಿಸಿದರು.ಬೆಂಗಳೂರಿನ ನಯನ ಸಭಾಂಗಣದಲ್ಲಿ ಬುಧವಾರ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪತ್ರಕರ್ತ ಲೇಖಕ ಉಜ್ಜಿನಿ ರುದ್ರಪ್ಪರವರು ರಚಿಸಿರುವ ಪ್ರೀತಿಸಿ ಮದುವೆಯಾದ ಜೋಡಿಗಳ ನೈಜ ಘಟನೆಗಳನ್ನ ಒಳಗೊಂಡ ಪ್ರೀತಿಯನ್ನು ಹಂಬಲಿಸಿ ಕೃತಿ ಲೋಕಾರ್ಪಣೆ ಮಾಡಿದ ಸಂದರ್ಭ, ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ, ಮಾಜಿ ಸಚಿವರಾದ ಹೆಚ್ ಎಂ ರೇವಣ್ಣ, ನಟ ಚೇತನ್ ಕುಮಾರ್, ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ ವಿಮರ್ಶಕ ಕವಿ. ಎಲ್.ಎನ್. ಮುಕುಂದರಾಜ್, ಅಕ್ಕಮಹಾದೇವಿ ಪ್ರಶಸ್ತಿ ಪುರಸ್ಕೃತೆ ಡಾ. ವಸುಂಧರಾ ಭೂಪತಿ ಉಪಸ್ಥಿತರಿದ್ದರು.