ಬೆಂಗಳೂರು: ನಾರಾಯಣ ಒಲಿಂಪಿಯಾಡ್ ಶಾಲೆ, ಸರಸ್ವತಿ ಭವನ, ಗೋರವಿ ಗೇರೆಯ ಏಳನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಅವಲಮಂಡ ದಿಯಾ ಚೌಧರಿ ಭರತನಾಟ್ಯದಲ್ಲಿ ವಿಶ್ವ ಮಟ್ಟದ ಗೌರವ ತಂದುಕೊಟ್ಟಿದ್ದಾಳೆ.
ದಿಯಾ, ಟಿಎಸ್ ಎಎಲ್ ವರ್ಲ್ಡ್ ಕಲ್ಚರ್ & ಆರ್ಟ್ ಸೆಂಟರ್ (ಡಾ. ರಶ್ಮಿ ವಿಜಯ್ ಬಿ.ಜಿ.) ಆಯೋಜಿಸಿದ ಅತ್ಯುದೀರ್ಘ ಭರತನಾಟ್ಯ ಸಮೂಹ ಪ್ರದರ್ಶನದ ವಿಶ್ವ ದಾಖಲೆ ಪ್ರಯತ್ನದಲ್ಲಿ ೬೫ ಮಂದಿ ಕಲಾವಿದರು ಜೊತೆ ಪಾಲ್ಗೊಂಡು ಈ ಸಾಧನೆ ಮಾಡಿದ್ದಾಳೆ. ಈ ಕಾರ್ಯಕ್ರಮವು ೨೮ ಸೆಪ್ಟೆಂಬರ್ ೨೦೨೫ ರಂದು ಎಡಿಮಾ ಕಲ್ಚರ್ ಸೆಂಟರ್, ಕೋಲಾರ್, ಬೆಂಗಳೂರು, ಕರ್ನಾಟಕದಲ್ಲಿ ನಡೆಯಿತು.
ಶಾಲೆಯ ಪ್ರಿನ್ಸಿಪಾಲ್ ಲೊಲ್ಲಾ ಪವಾನಾರ್ಕ್ ಹಾಗೂ ಎಜಿಎಮ್ ಶ್ರೀ ಪಿ. ಶ್ರೀನಿವಾಸುಲು ದಿಯಾ ಅವರ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಶಾಲೆಯು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು. ಅವರು ವಿದ್ಯಾರ್ಥಿಗಳನ್ನು ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ ಕರಾಟೆ, ನೃತ್ಯ, ಯೋಗ ಸೇರಿದಂತೆ ರಾಷ್ಟç-ಅಂತರರಾಷ್ಟಿçÃಯ ಮಟ್ಟದ ಚಟುವಟಿಕೆಗಳಲ್ಲಿ ಉತ್ತೇಜಿಸುತ್ತಿರುವುದಾಗಿ ಹೇಳಿದರು.ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿದಿನ ಯೋಗ ತರಬೇತಿ ನೀಡಲಾಗುತ್ತಿದ್ದು, ಇದು ಅವರಿಗೆ ಪ್ರೇರಣೆ, ಆತ್ಮವಿಶ್ವಾಸ ಮತ್ತು ಶಿಸ್ತಿನ ಅಭಿವೃದ್ದಿಗೆ ಸಹಕಾರಿ ಆಗುತ್ತದೆ.