ಬೆಳಗಾವಿ: ಬಿಜೆಪಿ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರು ವಿರೋಧ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಬಿಜೆಪಿಯ ಆರ್.ಅಶೋಕ್ ಡಿ.ಕೆ ಶಿವಕುಮಾರ್ ಈ ಬಗ್ಗೆ ಹೇಳುವ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ತಮ್ಮ ಸಂಸದರಾಗಿದ್ದಾರೆ, ಅವರಿಗೆ ಯಾವ ಮೋಹ ಇದೆ, ಇದನ್ನು ಸಹೋದರ ವ್ಯಾಮೋಹ ಎಂದು ಕರೆಯಬೇಕಾ? ಶಾಸಕರು ವಿಧಾನಸೌಧದಲ್ಲಿ ಮಾತ್ರವಲ್ಲ ಹೊರಗಡೆಯೂ ಹೋರಾಟ ಮಾಡಬೇಕು, ಈ ಕಾಮನ್ಸೆನ್ಸ್ ಡಿ.ಕೆ. ಶಿವಕುಮಾರ್ಗೆ ಇರಬೇಕು, ಬಿಜೆಪಿಯ ಹೋರಾಟ ಮಾಡಿದರೆ ಸರ್ಕಾರ ಬಿದ್ದು ಹೋಗುತ್ತೆ ಎಂಬ ಭಯ ಇರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನಲ್ಲಿ ಕೂಡ ಗೊಂದಲ ಎದ್ದು ಕಾಣುತ್ತಿದೆ. ಬಿ.ಕೆ. ಹರಿಪ್ರಸಾದ್ ಹೇಳಿಕೆಯಿಂದ ಇದು ಗೊತ್ತಾಗುತ್ತಿದೆ. ಸಭೆ, ಪ್ರತಿಭಟನೆ ಮಾಡುವುದು ತಪ್ಪು ಎಂದು ಹೇಳಲು ಡಿಕೆಶಿ ಯಾರು? ಅವರ ಅನುಮತಿಯನ್ನು ಪಡೆದುಕೊಳ್ಳಬೇಕಾ? ಅವರು ನಮ್ಮ ಪಕ್ಷಕ್ಕೆ ಸೇರಿದ್ದಾರಾ? ಬೇಕಾದರೆ ಅವರು ನಮ್ಮ ಪಕ್ಷಕ್ಕೆ ಸೇರಲಿ, ಆ ಬಳಿಕ ಅವರ ಸಲಹೆ ಪಡೆಯುತ್ತೇವೆ ಎಂದಿರುವ ಅಶೋಕ್ ಡಿಕೆಶಿ ಕೇಸ್ ವಾಪಸ್ ಕೂಡ ಚರ್ಚೆಗೆ ತೆಗೆದುಕೊಳ್ಳುತ್ತೇವೆ, ಹಿರಿಯರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.