ಬೆಂಗಳೂರು: ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಳವಳ ವ್ಯಕ್ತಪಡಿಸಿದರು.ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡುತ್ತಿದೆ, ತೈಲ ಬೆಲೆ ಏರಿಕೆ ಮಾಡುತ್ತಿದೆ. ಈ ಬಗ್ಗೆ ಸುರ್ಜೇವಾಲಾ, ಸಿಎಂ ಅವರೊಂದಿಗೆ ಮಾತನಾಡ್ತೇನೆ ಎಂದು ಹೇಳಿದರು. ಇನ್ನೂ ಐಪಿಎಲ್ ಟಿಕೆಟ್ಗೆ ಶಾಸಕರ ಬೇಡಿಕೆ ಕುರಿತು ಮಾತನಾಡಿದ ಡಿಸಿಎಂ, ಶಾಸಕರ ಬೇಡಿಕೆ ಸರಿ ಇದೆ. ಶಾಸಕರು ಕೂಡ ವ್ಯವಸ್ಥೆಯ ಭಾಗ. ನಮ್ಮ ಶಾಸಕರಿಗೆ ವ್ಯವಸ್ಥೆ ಮಾಡಬೇಕು. ನಾನು ಕೆಎಸ್ಸಿಎ ಅಧ್ಯಕ್ಷರ ಜೊತೆ ಇಂದು ಮಾತಾಡುತ್ತೇನೆ ಎಂದರು.ಇದೇ ವೇಳೆ ಟಿಕೆಟ್ ಬೇಡಿಕೆ ವಿರೋಧಿಸಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಕಿಡಿ ಕಾರಿದರು. ತೇಜಸ್ವಿ ಸೂರ್ಯ ತನ್ನ ಜ್ಞಾನವನ್ನ ಅವರ ಪಾರ್ಟಿ ಅವರಿಗೆ ಹೇಳಲಿ, ನಮಗೆ ಅಲ್ಲ ಎಂದು ತಿವಿದರು.



