ದೇವನಹಳ್ಳಿ: ಪತ್ರಿಕಾ ವಿತರಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ವಿಶೇಷಚೇತನರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲದಿರುವುದರಿಂದ ಅಂತಹ ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ ದ್ದು, ಅದೇ ರೀತಿ ವಿಶೇಷಚೇತನರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ನಮ್ಮ ಸಮಿತಿವತಿಯಿಂದ ಉಚಿತ ಜೀವವಿಮೆ, ಯಶಸ್ವಿನಿ ಕಾರ್ಡ್ ಶೀಘ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾನವ ಹಕ್ಕುಗಳ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಡಿ.ಕೆ.ಮಹೇಂದ್ರ ಕುಮಾರ್ ತಿಳಿಸಿದರು.
ಕಾರ್ಮಿಕ ದಿನಾಚರಣೆ ಅಂಗವಾಗಿ ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿವತಿಯಿಂದ ಹಮ್ಮಿ ಕೊಂಡಿದ್ದ ಪತ್ರಿಕಾ ವಿತರಕರಿಗೆ ಹಾಗೂ ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು ನಮ್ಮ ಸಮಿತಿ ನಿರಂತರ ವಾಗಿ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಹಾಗೂ ಬೀದಿಬದಿ ವ್ಯಾಪಾರಿಗಳು ಪತ್ರಿಕಾ ವಿತರಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಮಾತನಾಡಿ ಸಮಾಜದಲ್ಲಿ ಬಡತನ ರೇಖೆಗಿಂದ ಕೆಳಮಟ್ಟದಲ್ಲಿರುವ ವ್ಯಕ್ತಿಗಳನ್ನು ಗುರ್ತಿಸಿ ಸಹಾಯ ಮಾಡುವ ಸಂಸ್ಥೆಗಳಿಗೆ ನಮ್ಮ ಸಂಘಟನೆಯಿಂದ ಸಹಾಯ ಹಸ್ತ ನೀಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತಿರುವ ಮಂಜುಳಾಜ್ಯೋತಿ, ಪ್ರತಿಮಾ,ನಿರ್ಮಲಾ, ಲತಾ, ಸತ್ಯನಾರಾಯಣ, ವಿಜಯಕುಮಾರ್ (ಮಾಮ) ಸಂಗೀತಾ ಮಂಜುನಾಥ್, ಅಭಿನಂದಿಸಿ ಗೌರವಿಸಲಾಯಿತು.
ಇದೆ ವೇಳೆ ಪುರಸಭಾ ಸದಸ್ಯ ಹಾಗೂ ಸಮಿತಿಯ ಪ್ರ,ಕಾರ್ಯದರ್ಶಿ ಡಿ.ಆರ್. ಬಾಲರಾಜು, ಉಪಾಧ್ಯಕ್ಷ ಎಂ.ಝಡ್. ಸರ್ಕಾರ್, ಮಹಿಳಾ ಅಧ್ಯಕ್ಷೆ ಎಂ. ವಸಂತಾ, ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಸೃಷ್ಠಿಕರ್ತ ಪತ್ರಿಕಾ ಸಂಪಾದಕ ವಸಂತಾಚಾರ್ಯ, ಶಿವಕುಮಾರ್, ಆಂಜಿನಪ್ಪ, ಸುರೇಶ್, ಶ್ರೀನಿವಾಸ್, ಬಿದಲೂರು ಶಶಿಧರ್, ಪತ್ರಕರ್ತರಾದ ರಾಧಾಕೃಷ್ಣ, ನರಸಿಂಹಮೂರ್ತಿ, ರಾಜು ಅಗಸ್ತ್ಯ, ಸೀತಾರಾಮ್, ಶಂಕರ್ ಪ್ರತಿಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.