This is the title of the web page
This is the title of the web page

ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಮತಪ್ರಚಾರ

ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಪತ್ನಿ ಉಷಾ ಶಿವಕುಮಾರ್ ರವರು ತಮ್ಮ ಎರಡನೇ ದಿನದ ಚುನಾವಣಾ ಪ್ರಚಾರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಿ ತಮ್ಮ ಪತಿ ಶಿವಕುಮಾರ್ ರವರಿಗೆ ಆಶೀರ್ವಾದಿಸುವಂತೆ ಮನವಿ ಮಾಡಿದರು
ನಗರದ ಕೆಲವು ಬಡಾವಣೆಗಳಲ್ಲಿ ಎರಡನೇ ದಿನದ ಪ್ರಚಾರ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ.

ಇನ್ನು ಹತ್ತು ದಿನಗಳ ಕಾಲ ನಿರಂತರವಾಗಿ ತಾಲೂಕಿನಾದ್ಯಂತ ಪ್ರಚಾರ ನಡೆಸಲಿದ್ದು ನಾನು ಹೋದ ಕಡೆ ಜನರು ಬಹಳ ಆತ್ಮೀಯವಾಗಿ ತಮ್ಮ ಮನೆಯ ಮಗಳಂತೆ ನನ್ನನ್ನು ಕಾಣುತ್ತಿದ್ದು ಇದರಿಂದ ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿದೆ ಎಂದರು,ನಗರದ ಜನತೆ ನೀವು ಬರ ದಿದ್ದರೂ ನಮ್ಮ ಮತ ಡಿಕೆಶಿ ಯವರಿಗೆ ಹಾಕುವುದುಎಂದು ಹೇಳುತ್ತಿರುವುದು ನೋಡಿದರೆ ಜನತೆ ನಮ್ಮ ಪತಿಯ ಮೇಲೆ ಇಟ್ಟಿರುವ ಪ್ರೀತಿ,ವಿಶ್ವಾಸ,ನಂಬಿಕೆಯನ್ನು ತೋರಿಸುತ್ತಿದ್ದು ಅವರಿಗೆ ನಮ್ಮ ಕುಟುಂಬ ಎಂದಿಗೂ ಮರೆಯಲಾಗದು ಎಂದರು,

ಕ್ಷೇತ್ರದಲ್ಲಿ ಸಂಸದ ಡಿ.ಕೆ ಸುರೇಶ್ ರವರು ಶಿವಕುಮಾರ್ ರವರಿಗೆ ಒಂದು ಶಕ್ತಿಯಾಗಿದ್ದು ಈ ಬಾರಿ ಚುನಾವಣೆಯ ಉಸ್ತುವಾರಿಯನ್ನು ಸುರೇಶ್ ರವರು ತೆಗೆದುಕೊಂಡಿರು ವುದರಿಂದ ಶಿವಕುಮಾರ್ ರವರು ಇಡೀ ರಾಜ್ಯಾದ್ಯಂತ ಪ್ರಚಾರ ನಡೆಸಲು ಸಹಕಾರಿಯಾಗಲಿದೆ ಎಂದರು,

ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಬಗ್ಗೆ ಪಶ್ನೆಗೆ ಉತ್ತರಿಸಿದ ಅವರು ಅದು ಕಾಂಗ್ರೆಸ್ ಪಕ್ಷದ ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಸಂಬಂಧಪಟ್ಟಿದ್ದಾಗಿದ್ದು, ಪಕ್ಷದ ಹೈಕಮಾಂಡ್ ಹಾಗು ದೇವರ ಇಚ್ಚೆಯಿದ್ದರೆ ಸಾಧ್ಯವಾಗಲಿದೆ ಎಂದರು,

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷ ಕೆ. ಟಿ. ಕಿರಣ್ ನಗರ ಸಭೆಯ ಸದಸ್ಯರುಗಳು ಹಾಗೂ ಯುವ ಕಾಂಗ್ರೆಸ್ ಮುಖಂಡರು ಪ್ರಚಾರದಲ್ಲಿ ಭಾಗಿಯಾಗಿದ್ದರು.