ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ನಡೀತಿದೆ. ಪವರ್ ಶೇರಿಂಗ್, ಸಂಪುಟ ಪುನಾರಚನೆ ಸೇರಿ ಹಲವಾರು ಮಾತುಗಳು ಕೇಳಿ
ಬರುತ್ತಿವೆ. ಈ ನಡುವೆ ತಡರಾತ್ರಿ ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿದ್ದಾರೆ.
ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ತಡರಾತ್ರಿ ಡಿಕೆಶಿ ಭೇಟಿಯಾಗಿದ್ದು, ಸುಮಾರು ೧ ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ. ಹೀಗಾಗಿ ನವೆಂಬರ್ ಕ್ರಾಂತಿ ಬದಲಿಗೆ ಈ ಶಾಂತಿಯ ಬೆಳವಣಿಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಮಾತುಕತೆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಡಿಕೆಶಿಗೆ ಅಭಯ ನೀಡಿದ್ದಾರೆಂದು ತಿಳಿದುಬಂದಿದೆ. ಪಕ್ಷ ನಿಷ್ಠೆ ಹೈಕಮಾಂಡ್ ನಿಷ್ಠೆಗೆ ತಕ್ಕ ಪ್ರತಿಫಲ ಸಿಗಲಿದೆ. ಸೂಕ್ತ ಸಮಯದವರೆಗೆ ತಾಳ್ಮೆಯಿಂದ ಇರಿ ಎಂದು ಸಲಹೆ ನೀಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಹೈಕಮಾಂಡ್ ರಾಜ್ಯದ ಎಲ್ಲಾ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಬಿಹಾರ ಚುನಾವಣೆ ಮುಗಿದ ಬಳಿಕ ಎಲ್ಲರೂ ಕುಳಿತು ಮಾತನಾಡೋಣ. ಎಲ್ಲಾ ವಿಚಾರದ ಬಗ್ಗೆ ಒಂದು ಕ್ಲ್ಯಾರಿಟಿಗೆ ಬರೋಣ. ನಿಮ್ಮ ಪಕ್ಷ ನಿಷ್ಠೆ ಹೈಕಮಾಂಡ್ ನಿಷ್ಠೆಗೆ ತಕ್ಕ ಪ್ರತಿಫಲ ಸಿಗಲಿದೆ. ಸೂಕ್ತ ಸಮಯದವರೆಗೆ ತಾಳ್ಮೆಯಿಂದ ಇರಿ. ಹೈಕಮಾಂಡ್ ಮನಸ್ಸಿನಲ್ಲೂ ಒಂದಷ್ಟು ವಿಚಾರಗಳಿವೆ ಎಲ್ಲವೂ ಬಿಹಾರ ಚುನಾವಣೆ ಬಳಿಕ ಮಾತನಾಡೋಣ ಎಂದು ಖರ್ಗೆ ಅವರು ಅಭಯ ನೀಡಿದ್ದಾರೆ.