ಚೆನ್ನೈ: ರಾಜ್ಯಪಾಲರಾದ ಆರ್.ಎನ್. ರವಿ ತಮ್ಮ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಡಿಎಂಕೆ ಸರ್ಕಾರ ಆರೋಪಿಸಿದೆ. ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ದೂರನ್ನೂ ಸಹ ಸಲ್ಲಿಸಲಾಗಿದೆ.
ಬಿಲ್ ಗಳಿಗೆ ಸಹಿ ಮಾಡುವಲ್ಲಿ ಆರ್.ಎನ್. ರವಿಯವರು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ತಮಿಳುನಾಡು ವಿಧಾನಸಭೆ ಅನುಮೋದಿಸಿರುವ ಆದೇಶಗಳನ್ನು ಜಾರಿಗೊಳಿಸಲೂ ಸಹ ಇದೇ ರೀತಿ ಸರ್ಕಾರದೊಡನೆ ಅಸಹಕಾರ ತೋರುತ್ತಿದ್ದಾರೆ ಎಂದು ತಮಿಳುನಾಡಿನ ಡಿಎಂಕೆ ಸರ್ಕಾರ ಆರೋಪಿಸಿದೆ.
ಹೀಗಾಗಿ, ಬಿಲ್ಗಳು, ಸರ್ಕಾರದ ಆದೇಶಗಳು ಹಾಗು ಫೈಲ್ಗಳನ್ನು ನಿಗದಿತ ಸಮಯದೊಳಗೆ ಸಹಿ ಮಾಡುವಂತೆ ರಾಜ್ಯಪಾಲರಿಗೆ ನಿರ್ದೇಶಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿಯನ್ನು ಸಲ್ಲಿಸಿದೆ.