ನವದೆಹಲಿ: ನನಗೆ ಮಂತ್ರಿ ಸ್ಥಾನ ಬೇಕೆಂದು ನಾನು ಒತ್ತಡ ಹಾಕುವುದಿಲ್ಲ ಎಂದು ಮಂಡ್ಯ ಸಂಸದ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಎನ್ಡಿಎ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ನರೇಂದ್ರ ಮೋದಿ ನಾಯಕತ್ವದಲ್ಲಿ ಮತ್ತೆ ಸರ್ಕಾರ ಮುಂದುವರಿಯಲಿದೆ. ಸಚಿವ ಸ್ಥಾನದ ಬಗ್ಗೆ ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ಸ್ಥಳೀಯ ಪಕ್ಷಗಳಿಗೆ ಸಹ ಖಾತೆ ನೀಡುತ್ತಾರೆ. ನಮ್ಮಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎನ್ನುವುದು ಹೈಕಮಾಂಡ್ಗೆ ಗೊತ್ತಿದೆ ಎಂದು ತಿಳಿಸಿದರು.ನಾಡಿನ ಜನತೆಗೆ, ದೇಶಕ್ಕೆ ಒಳ್ಳೆದಾಗುವ ಖಾತೆ ಸಿಕ್ಕಿದರೆ ಉತ್ತಮ ವಾಗಿ ಕೆಲಸ ಮಾಡಬಹುದು.
ಡಾ. ಮಂಜುನಾಥ್ಗೆ ಖಾತೆ ನೀಡುವ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ. ನನಗೆ ಮಂತ್ರಿ ಸ್ಥಾನ ನೀಡಬೇಕು ಎಂದು ನಾನು ನಾನು ಒತ್ತಡ ಹಾಕುತ್ತಿಲ್ಲ. ಅವರು ನೀಡಿದರೆ ಜವಾಬ್ದಾರಿ ನಿರ್ವಹಿಸುತ್ತೇನೆ ಅಷ್ಟೇ. ತೀರ್ಮಾನ ಏನಿದ್ದರೂ ಸಹ ಅವರದ್ದು ಎಂದು ಪ್ರತಿಕ್ರಿಯಿಸಿದ್ದಾರೆ.