This is the title of the web page
This is the title of the web page

ಐಪಿಎಲ್‍ನಲ್ಲಿ ಮೊದಲ ಶತಕ ಸಿಡಿಸಿದ ಆಟಗಾರ ಯಾರು ಗೊತ್ತಾ?

ಮುಂಬೈ: ಐಪಿಎಲ್ 2023 ಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕೆಲವು ಅಪರೂಪದ ದಾಖಲೆಗಳ ಬಗ್ಗೆ ನೋಡೋಣ.
ಐಪಿಎಲ್ ನಲ್ಲಿ ಇದುವರೆಗೆ ಹಲವು ಬ್ಯಾಟಿಗರು ಶತಕ ಸಿಡಿಸಿ ಮಿಂಚಿದ್ದಾರೆ. ನ್ಯೂಜಿಲೆಂಡ್ ಮೂಲಕ ಕೆಕೆಆರ್ ಆಟಗಾರ ಬ್ರೆಂಡಮ್ ಮೆಕ್ಕಲಂ ಅಜೇಯ 158 ಸಿಡಿಸಿದ್ದು ಐಪಿಎಲ್ ಇತಿಹಾಸದ ಗರಿಷ್ಠ ವೈಯಕ್ತಿಕ ರನ್ ದಾಖಲೆ.

ಐಪಿಎಲ್ ಇತಿಹಾಸದಲ್ಲೇ ಮೊದಲ ಶತಕ ದಾಖಲಿಸಿದ ಗರಿಮೆ ಅವರದ್ದು. ಆದರೆ ಐಪಿಎಲ್ ನಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ಎನ್ನುವ ದಾಖಲೆ ಇರುವುದು ಕರ್ನಾಟಕದವರಾದ ಮನೀಶ್ ಪಾಂಡೆ ಹೆಸರಿನಲ್ಲಿ. ಮನೀಶ್ ಪಾಂಡೆ 2009 ರಲ್ಲಿ ಅಜೇಯ 114 ರನ್ ಸಿಡಿಸಿ ಈ ದಾಖಲೆ ಮಾಡಿದ್ದರು.