ದೊಡ್ಡಬಳ್ಳಾಪುರ: ಬೇಸಿಗೆ ಆರಂಭವಾಗಿರುವುದರಿAದ ನೀರಿನ ನಿರ್ವಹಣೆಗೆ ಒತ್ತು ನೀಡಬೇಕು. ವಾರ್ಡ್ಳ ಅನುದಾನದಲ್ಲಿ ತಾರತಮ್ಯ ಮಾಡಬಾರದು. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಿಯಮಾನುಸಾರ ಆಗಲಿ. ನಗರಸಭೆ ಸ್ವತ್ತುಗಳನ್ನು ಉಳಿಸಿಕೊಳ್ಳುವ ಬಗ್ಗೆ ಗಂಭೀರ ಕ್ರಮ ವಹಿಸಬೇಕಿದೆ ಎನ್ನುವ ವಿಷಯಗಳು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದವು.
ನಗರದ 18ನೇ ವಾರ್ಡ್ನಲ್ಲಿ ವಾರಕ್ಕೊಮ್ಮೆ ನೀರು ಸರಬರಾಜಾಗುತ್ತಿದ್ದರೂ, ಕಡಿಮೆ ಸಮಯ ಬಿಡಲಾಗುತ್ತಿದೆ. ಸಮಯ ಹೆಚ್ಚು ಮಾಡಬೇಕು, ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ನೋಡಿ ಕೊಳ್ಳಬೇಕು ಎಂದು ಸದಸ್ಯ ಶಿವಣ್ಣ ಹೇಳಿದರು.
ನಗರದಲ್ಲಿ ರಸ್ತೆಗಳುಹದಗೆಟ್ಟಿದ್ದು, ರಸ್ತೆಯಲ್ಲಿನ ಗುಂಡಿಗಳಿAದ ಸಾರ್ವಜನಿಕರು ಓಡಾಡಲು ತೊಂದರೆಯಾಗಿದ್ದು, ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ನಗರಸಭಾ ಸದಸ್ಯರು ಒತ್ತಾಯಿಸಿದರು.
ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಅಪ್ಪಣೆಯ ಮೇರೆಗೆ ವಿಷಯಗಳಲ್ಲಿಯೇ ಹೆಚ್ಚಿನ ಅನುಮೋದನೆಗಳು ದೊರೆಯುತ್ತಿದ್ದು, ಇದು ಸದಸ್ಯರ ಗಮನಕ್ಕೆ ಬರುತ್ತಿಲ್ಲ. ವಾರ್ಡ್ ಗಳ ಅನುದಾನದಲ್ಲಿ ತಾರತಮ್ಯ ಆಗುತ್ತಿದ್ದು, ಹಿಂದಿನ ಸಭೆಯ ನಡಾವಳಿಗಳನ್ನು ಸದಸ್ಯರಿಗೆ ಮುಂದಿನ ಸಭೆ ನಡೆಯುವ ಎರಡು ದಿನ ಮುಂಚಿತವಾಗಿ ನೀಡಿದರೆ
ವಿಷಯಗಳ ಬಗ್ಗೆ ನಮ್ಮ ಗಮನ ಹರಿಸಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಸದಸ್ಯರ ಮನವಿಯನ್ನು ಪರಿಗಣಿಸಿ ಎಲ್ಲಾ ವಾರ್ಡ್ಗಳಿಗೂ ಸಮಾನ ಅನುದಾನ ನೀಡಬೇಕು ಎಂದು ಸದಸ್ಯರಾದ ಎಚ್. ಎಸ್.ಶಿವಶಂಕರ್ ಹಾಗೂ ಡಿ.ಎಂ.ಆನAದ್ ಹೇಳಿದರು. ಟಿ.ಎನ್.ಪ್ರಭುದೇವ್ ಮಾತನಾಡಿ, ನಗರಸಭೆಗೆ ಸೇರಿದ ಸ್ವತ್ತುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಸ್ವತ್ತುಗಳಿಗೆ ಫಲಕ ಹಾಕಿ ಒತ್ತುವರಿ ಯಾಗದಂತೆ ತಡೆಗಟ್ಟಬೇಕು. ನಗರೋತ್ಥಾನದಲ್ಲಿ ರಸ್ತೆ ಕಾಮಗಾರಿಗಳು ತ್ವರಿತವಾಗಿ ನಡೆಯಬೇಕು ಎಂದರು.
ನಗರದ ಜೀವನಾಡಿಯಾದ ನಾಗರಕೆರೆಯ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎನ್ನುವ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ತಾಂತ್ರಿಕ ವಿಭಾಗದ ಎಇಇ ರಾಮೇಗೌಡ, ನಗರೋತ್ಥಾನ 2.0 ಅಡಿ ನಾಗರಕೆರೆ ಅಭಿವೃದ್ಧಿ ಕೈಗೊಳ್ಳುವ ಕುರಿತು ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಪ್ರಸ್ತುತ ಪೈಪ್ ಲೈನ್ ಕಾಮಗಾರಿ ನಡೆಯುತ್ತಿರುವುದರಿಂದ ಮೊದಲು ಇದನ್ನು ಪೂರ್ಣಗೊಳಿಸುವಂತೆ ನಮಗೆ ಆದೇಶ ಬಂದಿದೆ.
ಈ ಕಾಮಗಾರಿಗಳಿಗೆ ಜಿಲ್ಲಾಧಿಕಾರಿ, ರಾಜ್ಯ ತಾಂತ್ರಿಕ ಸಮಿತಿ, ಉನ್ನತ ಸಮಿತಿ ಹಾಗೂ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಬೇಕಿದೆ. ನಾಗರಕೆರೆಯಲ್ಲಿ ಅಯ್ಯಪ್ಪ
ಸ್ವಾಮಿ ದೇವಾಲಯದ ಬಳಿ ನೀರಿನ ಶುದ್ದೀಕರಣವನ್ನು ಪಾಕ್ಸಾ÷್ಕನ್ ಕಂಪನಿಯ ಸಿಎಸ್ ಆರ್ ಅನುದಾನದ ಅಡಿಯಲ್ಲಿ
ಕೈಗೊತ್ತಿಕೊಳ್ಳಲಾಗುವುದು. ನಗರದ ಮುತ್ತೂರು ಕೆರೆಯನ್ನು ಪುನಕ್ಷೇತನ ಮಾಡಲಾಗುವುದು ಎಂದರು.
ಸದಸ್ಯ ವಿ.ಎಸ್.ರವಿಕುಮಾರ್ ಮಾತನಾಡಿ, ನಗರಸಭೆ ಅಂಗಡಿಗಳು ಹರಾಜಾಗಿದ್ದರೂ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ. ಕೆಲವು ಅಂಗಡಿಗಳನ್ನು ಮರು ಹರಾಜು ಮಾಡಬೇಕಿದೆ. ಈ ಬಗ್ಗೆ ಕ್ರಮ ವಹಿಸಬೇಕಿದೆ ಎಂದರು. ಸ್ಥಾಯಿ ಸಮಿತಿ ಆಯ್ಕೆ ನಿಯಮಾನುಸಾರ ನಡೆಯಬೇಕಿದೆ. ಸ್ಥಾಯಿ ಸಮಿತಿ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆಯಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಚುನಾವಣೆ ಮೂಲಕ ನಿಯಮಾನುಸಾರ ಆಯ್ಕೆ ನಡೆಯ ಬೇಕಿದೆ ಎಂದು ಸದಸ್ಯರಾದ ವಿ.ಎಸ್.ರವಿಕುಮಾರ್, ಎಚ್.ಎಸ್.ಶಿವಶಂಕರ್, ಆನಂದ್ ಹೇಳಿದರು.
ಪೌರಾಯುಕ್ತ ಕಾರ್ತಿಕೇಶ್ವರ ಪ್ರತಿಕ್ರಿಯಿಸಿ, ಸ್ಥಾಯಿ ಸಮಿತಿ ಆಯ್ಕೆಗೆ ವಿಶೇಷ ಸಭೆ ಕರೆಯಲಾಗುವುದು. ನಗರದ ಬಸ್ ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ. ಪೌರಾಯುಕ್ತ ಕಾರ್ತಿಕೇಶ್ವರ, ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
ದೊಡ್ಡಬಳ್ಳಾಪುರ ನಗರಸಭೆ ಸಾಮಾನ್ಯ ಹಲವು ವಿಷಯಗಳ ಚರ್ಚೆ



