ಮಾಗಡಿ: ನೂತನವಾಗಿ ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡು ಮೊದಲಬಾರಿಗೆ ಕಡತಕ್ಕೆ ಸಹಿ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮೇಕೆದಾಟು ಸೇರಿದಂತೆ ಹಲವು ನೀರಾವರಿ ಯೋಜನೆಯ ವಿಚಾರವಾಗಿ ಕಡತಕ್ಕೆ ಸಹಿ ಮಾಡಿದ್ದಾರೆ ಅಂದುಕೊಂಡರೆ ಅರಣ್ಯ ನಾಶ ಮಾಡಲು ಸಹಿ ಮಾಡಿದ್ದಾರೆ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.
ತಾಲ್ಲೂಕಿನ ಕಲ್ಯಾ ಮತ್ತು ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸುಮಾರುಇಪ್ಪತ್ತು ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಹಾಗೂ ಉದ್ಘಾಟನೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರುಹಾಗೂ ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಅವರು ಪಕ್ಷದ ಮುಖಂಡರೊಂದಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಮಾಜಿ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಸಚಿವರಾಗಿ ಮೊದಲ ಬಾರಿಗೆ ಕಡತಕ್ಕೆ ಸಹಿ ಮಾಡಿರುವುದನ್ನು ನೋಡಿ ಮೇಕೆದಾಟು, ಮಹದಾಯಿ, ಎತ್ತಿನಹೊಳೆ ನೀರಾವರಿ ಯೋಜನೆಯ ವಿಚಾರವಾಗಿ ಸಹಿ ಮಾಡಿದ್ದಾರೆ ಎಂದು ಕೊಂಡರೆ, ಕುದುರೆಮುಖ ಗಣಿಗಾರಿಕೆಗೆ ಅನುಮತಿ ನೀಡಿ, ಅರಣ್ಯ ನಾಶ ಮಾಡಲು ಸಹಿ ಮಾಡುವ ಮೂಲಕ ನಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಜೂ.27ರಂದು ನಡೆಯುವ ಕೆಂಪೇಗೌಡರ ಜಯಂತಿಯಂದು ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಮಾಹಿತಿ ನೀಡುತ್ತೇವೆ; ಸುಮಾರು 150 ಕೋಟಿ ರೂ ವೆಚ್ಚದಲ್ಲಿ ಕೆಂಪೇಗೌಡರ ಕೋಟೆ ಮತ್ತು ಕೆಂಪಾಪುರದಲ್ಲಿರುವ ಸಮಾಧಿಯ ಅಭಿವೃದ್ಧಿಗಾಗಿ ಈಗಾಗಲೇ ಚಾಲನೆ ನೀಡಿದ್ದು, ಅದರಲ್ಲಿ 20 ಕೋಟಿ ರೂಗಳ ಮಂಜೂರಾತಿಯನ್ನು ನೀಡಿದ್ದು, ಇನ್ನೂ 30 ಕೋಟಿ ಬಿಡುಗಡೆಗೆ ರೆಡಿ ಇದೆ. ಇದೇ ತಿಂಗಳ ಜೂ.27ರಂದು ನಡೆಯುವ ಕೆಂಪೇಗೌಡರ ಜಯಂತಿಯಂದು ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವುದನ್ನು ಮತ್ತೊಮ್ಮೆ ನಿಮ್ಮಗಳ ಮುಂದೆ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಮತ್ತು ಉಸ್ತುವಾರಿ ಸಚಿವರಾದ ರಾಮಲಿಂಗರೆಡ್ಡಿ ಅವರು ಶುಕ್ರವಾರ ತಾಲ್ಲೂಕಿನ ಆಗಲಕೋಟೆ ಮತ್ತು ಮತ್ತಿಕೆರೆಯಲ್ಲಿ ನಿರ್ಮಾಣವಾಗಿರುವ ವಿ.ಎಸ್.ಎಸ್.ಎನ್ ಕಟ್ಟಡಗಳನ್ನು ಉದ್ಘಾಟನೆ ಮಾಡಲು ಆಗಮಿಸುತ್ತಿದ್ದಾರೆ. ಪಟ್ಟಣದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ನೂತನ ಕೃಷಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ಸುಮಾರು 5 ಕೋಟಿ ರೂ ವೆಚ್ಚದಲ್ಲಿ ರೈತರಿಗೆ ತರಬೇತಿಯನ್ನು ನೀಡುವ ಸಂಸ್ಥೆಯನ್ನು ಸ್ಥಾಪಿಸಲು ಮಂಜೂರಾತಿ ನೀಡಿದ್ದಾರೆ ಅವರಿಗೆ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ರೈತರಿಗೆ ಉತ್ತಮವಾದ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಗೆ ಹುಲಿಕಟ್ಟೆ ಗ್ರಾಮದಲ್ಲಿ 5 ಎಕರೆಯನ್ನು ಹಸ್ತಾಂತರವನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಗ್ಗೀಕುಪ್ಪೆ ಗ್ರಾಪಂ ಅದ್ಯಕ್ಷ ಮದರಾಯ್ಯನಪಾಳ್ಯ ರಾಜಣ್ಣ.ತಹಶೀಲ್ದಾರ್ ಶರತ್ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜೆಜೆಎಂ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.