ಬೆಳಗಾವಿ: ಮಹಿಳೆಯರ ಬಗ್ಗೆ ಆಡಿರುವ ಮಾತಿಗೆ ವಿಷಾಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿಷಾಧ ನಮಗೆ ಬೇಡ ಎಂದು ಉಪಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರ್ಡರ್ ಮಾಡಿ ವಿಷಾಧವ್ಯಕ್ತಪಡಿಸಿದರೆ ಹೇಗೆ ಎಂದು ಪ್ರಶ್ನಿಸಿರುವ ಅವರು, ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಕೇಸ್ಗೆ ಬಹಳ ಫೇಮಸ್ ಎಂದಿದ್ದಾರೆ.ಎಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ದೇವೇಗೌಡರಿಗೆ ನನ್ನ ಕಂಡರೆ ತುಂಬಾ ಲವ್ ಅದಕ್ಕೆ ನನ್ನ ಜತೆ ಜಗಳವಾಡುತ್ತಾರೆ ಎಂದು ಹೇಳಿರುವ ಡಿಕೆಶಿ, ಕುಮಾರಸ್ವಾಮಿ ಅವರಿಗೆ ಪಿಟ್ಪ್ಯಾಕೇಟ್ ಮಾಡಿ ರೂಢಿ ಅದಕ್ಕೆ ನಮ್ಮ ಗ್ಯಾರಂಟಿಗಳನ್ನು ಪಿಟ್ಪ್ಯಾಕೇಟ್ ಎಂದು ಹೇಳುತ್ತಾರೆ ಎಂದು ತಮ್ಮ ಮಾತಿನುದ್ದಕ್ಕೂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿಯೇ ಮಾತನಾಡಿದರು.
ಮಹಿಳೆಯರು ದಾರಿ ತಪ್ಪುತ್ತಿದ್ದಾರ ಎಂದರೆ ಏನು ಅರ್ಥ, ಹಾಗಾಗಿ ನಾನು ಮಹಿಳೆಯರಿಗೆ ಒಂದು ಪಕ್ಷದ ಅಭ್ಯರ್ಥಿಯಾಗಿ ಕರೆ ಕೊಡುತ್ತೇನೆ. ನಿಮ್ಮ ಸ್ವಾಭಿಮಾನಕ್ಕಾಗಿ ಪ್ರತಿಭಟನೆ ನಡೆಸಿ ಎಂದು ಹೇಳುತ್ತೇನೆ ಎಂದಿದ್ದಾರೆ.ಒಂದು ಹಂತದಲ್ಲಿ ಕುಮಾರಸ್ವಾಮಿ ನೀನು ಈ ಚುನಾವಣೆಯಲ್ಲಿ ಗೆಲ್ಲಲ್ಲ ಎಂದಿದ್ದಾರೆ.