ಮಂಡ್ಯ: ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಬೇಡ. ಸರ್ಕಾರದ ಮುಂದೆ ನಾವು ಟಿಪ್ಪು ಜಯಂತಿ ಪ್ರಸ್ತಾಪ ಮಾಡಿಲ್ಲ. ಸರ್ಕಾರದ ಟಿಪ್ಪು ಜಯಂತಿ ಆಚರಣೆಯ ವಿರುದ್ಧ ನಾನು ಇದ್ದೇನೆ.
ನಮ್ಮ ಆಚರಣೆ ನಾವು ಮಾಡಿಕೊಳ್ಳುತ್ತೇವೆ. ನಮ್ಮ ಕಾರ್ಯಕ್ಕೆ ರಾಜ್ಯ ಸರ್ಕಾರ ಬೆಂಬಲ ಕೊಡುವುದು ಬೇಡ. ಟಿಪ್ಪು ಜಯಂತಿ ಮಾಡಲ್ಲ ಎಂದಾಗಲೂ ಸ್ವಾಗತ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಬಾರದು.
ಜನರ ನಡುವೆ ವೈಮನಸ್ಸು ಉಂಟು ಮಾಡಲು ನಮಗೆ ಇಷ್ಟ ಇಲ್ಲ. ಟಿಪ್ಪುವಿನ ಅನುಯಾಯಿಗಳಿಗೆ ಈ ಜಯಂತಿ ಮಾಡುವ ಶಕ್ತಿ ಇದೆ. ಟಿಪ್ಪುವಿನ ವಿಚಾರದಲ್ಲಿ ರಾಜಕೀಯ ಬೇಡ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.