ಪೀಣ್ಯ ದಾಸರಹಳ್ಳಿ: ಇಂದಿನ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಸರ್ಕಾರಿ ನೌಕರಿ ಪಡೆಯುವುದು ಕಷ್ಟವಾಗಿದೆ. ಶಿಕ್ಷಣ ಮತ್ತು ಕೌಶಲ್ಯದ ಆಧಾರದ ಮೇಲೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ’ ಎಂದು ಶಾಸಕ ಎಸ್ ಮುನಿರಾಜು ತಿಳಿಸಿದರು.
ಹೆಸರಘಟ್ಟ ಮುಖ್ಯ ರಸ್ತೆಯ ಎಂ.ಎಸ್. ಕಾಲೇಜ್ ಆಫ್ ಕಾಮರ್ಸ್ ವತಿಯಿಂದ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.‘ಖಾಸಗಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಗಳಿಗೆ ಅವಕಾಶಗಳಿವೆ. ವಿದ್ಯಾರ್ಥಿಗಳ ಪ್ರತಿಭೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಬಳವೂ ಸಿಗಲಿದೆ. ಇಂತಹ ಅವಕಾಶಗಳನ್ನು ಪಡೆದುಕೊಳ್ಳಬೇಕು’ ಎಂದರು.
‘ಇಂದು 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ನೀಡಲಿವೆ. ತಾವುಗಳು ಸಂದರ್ಶನ ನೀಡಿ ಉದ್ಯೋಗ ಪಡೆದು ಜೀವನ ನಿರ್ವಹಣೆ ಮಾಡಬೇಕಿದೆ. ಉದ್ಯೋಗ ಸಿಗದಿದ್ದರೆ ನಿರಾಶರಾಗಬೇಡಿ ಮತ್ತೆ ಪ್ರಯತ್ನಿಸುವ ಛಲ ನಿಮ್ಮದಾಗಲಿ’ ಎಂದು ಸಲಹೆ ನೀಡಿದರು.ಎಂಎಸ್ ಕಾಲೇಜಿನ ಅಧ್ಯಕ್ಷ ವಾಲ್ಟರ್ ಜೈ ಸಿಂಗ್ ಮಾತನಾಡಿ’ ನಮ್ಮ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಉದ್ಯೋಗ ಮೇಳಗಳನ್ನು ಮಾಡಿ ಸ್ವಲ್ಪಮಟ್ಟಿಗಾದರೂ ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತಿದ್ದೇವೆ’ ಎಂದರು.
500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ 200ಕ್ಕು ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಆದೇಶ ಪತ್ರಗಳನ್ನು ಪಡೆದರು.
ಈ ಸಂದರ್ಭದಲ್ಲಿ ಸಬ್ ರಿಜಿನಲ್ ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್, ಬೆಂಗಳೂರು ಜಿಲ್ಲಾ ಎಂಪ್ಲಾಯ್ಮೆಂಟ್ ಆಫೀಸರ್ ಗೋವಿಂದರಾಜು, ಪ್ರೋಗ್ರಾಮ್ ಮ್ಯಾನೇಜರ್ ಅರವಿಂದ್ ಕ್ರಿಸ್ಟಿ, ಲವ್ಲಿ ವುಡ್ ಸೌತ್ ಅಂಡ್ ಈಸ್ಟ್ ರೀಜಿನಲ್ ಅಸೋಸಿಯೇಟ್ ಡೈರೆಕ್ಟರ್ ಸಾಯಿ ಪ್ರಸಾದ್, ಎಂ.ಎಸ್. ಕಾಲೇಜಿನ ಜೆ.ಕೆ. ನರಸಿಂಹಮೂರ್ತಿ, ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಪ್ಲೇಸ್ಮೆಂಟ್ ನ್ಯಾಷನಲ್ ಹೆಡ್ ಪುನೀತ್ ಬಿ.ಎಸ್, ಮ್ಯಾನೇಜರ್ ಕರ್ಪಂಗಂ ಪ್ರಕಾಶ್, ಮುಂತಾದವರಿದ್ದರು.ಹೆಸರಘಟ್ಟ ಮುಖ್ಯ ರಸ್ತೆಯ ಎಂ.ಎಸ್. ಕಾಲೇಜ್ ಆಫ್ ಕಾಮರ್ಸ್ ವತಿಯಿಂದ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳಕ್ಕೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು.