ಚಳ್ಳಕೆರೆ: ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ. ಹೊಸ ಜೀವಕೋಷಗಳು ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗಿ. ಮನುಷ್ಯನಿಗೆ ಯಾವುದೇ ಕಾಯಿಲೆಗಳು ಬರುವುದಿಲ್ಲ. ಎಂದು ತಾಲೂಕು ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಗೌಡ ಜಗದೀಶ ರುದ್ರೆ ತಿಳಿಸಿದರು.
ನಗರದ ತಾಲ್ಲೂಕು ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಹಾಗೂ ವಾಸವಿ ರಕ್ತ ನಿಧಿ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಸಹಯೋಗ ದೊಂದಿಗೆ ಏರ್ಪಡಿಸಿದ್ದ. ಉಚಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
18 ವರ್ಷದಿಂದ 40 ವರ್ಷ ದೊಳಗಿ ನ ಯುವಕ ಯುವತಿಯರು ರಕ್ತದಾನ ಮಾಡಿದರೆ.
ಅಮೂಲ್ಯ ಪ್ರಾಣಗಳನ್ನು ಉಳಿಸಿದಂತಾಗುತ್ತದೆ. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಿ ಮನುಷ್ಯರು ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ಅನೇಕ ಅಪಘಾತಗಳು ನಡೆದು ರಕ್ತ ಸೋರಿಕೆಯಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ.
ಇಂತಹ ಜೀವಗಳನ್ನು ರಕ್ಷಣೆ ಮಾಡಲು ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ನಮ್ಮ ದೇಶದಲ್ಲಿ ಎಲ್ಲಾ ದಾನಗಳನ್ನು ಮಾಡುತ್ತಾರೆ ಆದರೆ ರಕ್ತದಾನ ಮಾಡಲು ಹೆದರುತ್ತಾರೆ ಯಾರು ಹೆದರಬೇಕಾಗಿಲ್ಲ ರಕ್ತದಾನ ಮಾಡುವುದರಿಂದ ನಿಮ್ಮ ಆರೋಗ್ಯ ಮತ್ತಷ್ಟು ಉತ್ತಮವಾಗಿರುತ್ತದೆ ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾಗಿದೆ.ಮತ್ತೊಬ್ಬ ಮನುಷ್ಯನ ಜೀವ ಉಳಿಸಲು ರಕ್ತ ತುಂಬಾ ಅವಶ್ಯಕವಾಗಿದೆ. ಆದ್ದರಿಂದ ಬಡ ಗಾಯಾಳುಗಳ ಜೀವ ಉಳಿಸಲು ಪ್ರತಿಯೊಬ್ಬರು ರಕ್ತದಾನ ಮಾಡಿ. ಸಮಾಜಕ್ಕೆ ಆದರ್ಶವಾಗಿ ಬದುಕುವಂತೆ ಕರೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ ಯುವಕರು ರಕ್ತದಾನ ಮಾಡುವುದರ ಮೂಲಕ ಅಮೂಲ್ಯ ಪ್ರಾಣಗಳ ರಕ್ಷಣೆ ಮಾಡಲು ಮುಂದೆ ಬರಬೇಕಾಗಿದೆ. ಸಮಾಜದಲ್ಲಿ ಎಲ್ಲ ವಸ್ತುಗಳು ಧಾರಾಳವಾಗಿ ಸಿಗುತ್ತವೆ. ಆದರೆ ರಕ್ತ ಮಾತ್ರ ಸಿಗುವುದಿಲ್ಲ. ಇದರ ಮಹತ್ವವನ್ನು ಅರಿತಾಗ ಮಾತ್ರ ರಕ್ತದಾನದ ಬಗ್ಗೆ ಅರಿವು ಮೂಡಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ನ್ಯಾಯಾಧೀಶ ರಾದ ಜಗದೀಶ ಗೌಡ ರುದ್ರ, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ,ಉಪಾಧ್ಯಕ್ಷ ಪಿ.ಪಾಲಯ್ಯ, ಕಾರ್ಯದರ್ಶಿ ಸಿದ್ದರಾಜು, ಜಿ.ಎಂ.ಆನಂದ,ದೊಡ್ಡ ರಂಗಪ್ಪ, ಕುಮಾರ್,ಗೋಪಿ, ಜಿ.ಧನುನಂಜಯ, ರಾಮಕೃಷ್ಣ,ಎಚ್.ಡಿ.ಎಪ್.ಸಿ ಬ್ಯಾಂಕಿನ ವ್ಯವಸ್ಥಾಪಕ ರಾದ ಅರುಣ್, ಒಬೇಗೌಡ, ಡಿ.ಎಂ.ರಾಕೇಶ, ಸಂದೀಪ್, ಕಿರ್ತನ, ಶ್ಯಾಂ, ಪವನ್, ಮೋನಿಕ, ಸುನಿಲ್ ಸೇರಿದಂತೆ ಉಪಸ್ಥಿತರಿದ್ದರು.