This is the title of the web page
This is the title of the web page

ಕೆಲಸದಲ್ಲಿ ಜಾತಿಯನ್ನು ಹುಡುಕಬಾರದು: ವೆಂಕಟಲಕ್ಷ್ಮೀ

ಕೋಲಾರ: ಸಮಾಜದಲ್ಲಿನ ಯಾವುದೇ ಕೆಲಸವಾದರೂ ಅದರಲ್ಲಿ ಜಾತಿಯನ್ನು ಹುಡುಕಬಾರದು ಜೊತೆಗೆ ಸರಕಾರದ ಕೆಲಸ ಎಂದರೆ ಅದು ದೇವರ ಕೆಲಸ ಎಂಬುದನ್ನು ಅರ್ಥಮಾಡಿಕೊಂಡು ಸೇವೆಯನ್ನು ನೀಡುವುದೇ ಶರಣರಿಗೆ ನಾವು ಕೊಡುವ ಗೌರವ ಎಂದು ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಕಾಯಕ ಶರಣರ ಜಯಂತಿಯ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಕಾಯಕವೇ ದೇವರು ಎಂದು ಬಸವಣ್ಣನವರು ತಿಳಿಸಿದ್ದಾರೆ. ಅದೇ ರೀತಿ ಕೆಲಸದಲ್ಲಿ ಜಾತಿಯನ್ನು ಹುಡುಕಬಾರದು ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಎಂದು ಗೌರವಿಸಬೇಕು. ಸಮಾಜಕ್ಕೆ ಶರಣರು ತಮ್ಮ ವಚನಗಳ ಮೂಲಕ ಸಾಹಿತ್ಯವನ್ನು ಸರಳ ಕನ್ನಡದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿ ತಿಳಿಸಿದ್ದಾರೆ ಕಾಯಕ ಶರಣರ ಅವರ ಆದರ್ಶಗಳನ್ನು ಪಾಲಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಶ್ರೀನಿವಾಸ್ ರೆಡ್ಡಿ, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಚಂದ್ರಶೇಖರ್, ಡಿ.ಆರ್.ರಾಜಪ್ಪ, ಮಮತಾರೆಡ್ಡಿ, ಮತ್ತಿಕುಂಟೆ ಕೃಷ್ಣ, ಈನೆಲ ಈಜಲ ವೆಂಕಟಾಚಲಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.