ಕೆ.ಆರ್ .ನಗರ: ಕಾಕನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಅಲೆಮಾರಿ ಹಂದಿ ಜೋಗಿ ಸಮಾಜವನ್ನು ನರಚನಹಳ್ಳಿ ಗ್ರಾಪಂನಿಂದ ವಿಭಜಿಸಿ ಗಂಧನಹಳ್ಳಿಗೆ ಸೇರಿಸುವುದು ಬೇಡ. ಒಂದು ವೇಳೆ ವಿಭಜಿಸಿ ಸೇರಿಸುವುದಾದರೆ ಹೊಸ ಅಗ್ರಹಾರ ಗ್ರಾಮ ಪಂಚಾಯಿತಿಗೆ ಸೇರಿಸಿ. ಇಲ್ಲದಿದ್ದರೆ ನರುಚನಹಳ್ಳಿ ಗ್ರಾಮ ಪಂಚಾಯಿತಿಯಲ್ಲೇ ಇರಲಿ ಎಂದು ಕಾಕನಹಳ್ಳಿ ಹಂದಿ ಜೋಗಿ ಸಮಾಜದ ಮುಖಂಡ ಕೃಷ್ಣ ಚುನಾವಣಾ ಅಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರನ್ನು ಒತ್ತಾಯಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಅಲೆಮಾರಿ ಹಂದಿ ಜೋಗಿ ಸಮಾಜಕ್ಕೆ ಸೇರಿದ ನಮ್ಮನ್ನು ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಗೌರವಯುತವಾಗಿ ನಡೆದುಕೊಳ್ಳುತ್ತಿರುವ ನರಚನಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ 7 ಗ್ರಾಮದ ಎಲ್ಲಾ ಸಮಾಜದ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಯಾವುದೇ ಕಾರಣಕ್ಕೂ ನರಚನಹಳ್ಳಿ ಗ್ರಾಮ ಪಂಚಾಯಿತಿಯಿಂದ ಬೇರ್ಪಡಿಸುವುದು ಬೇಡ ಒಂದು ವೇಳೆ ಬೇರ್ಪಡಿಸಿದ್ದೆ ಆದಲ್ಲಿ ನಾವು ಗ್ರಾಮದ ಎಲ್ಲಾ ಹಂದಿ ಜೋಗಿಗಳು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎರಡು ಕಿಲೋಮೀಟರ್ ದೂರದಲ್ಲಿರುವ ಗಂಧನಹಳ್ಳಿ ಗ್ರಾಮದ ಕೆಲವು ಕಿಡಿಗೇಡಿಗಳು ನಮ್ಮ ಒಗ್ಗಟ್ಟನ್ನು ಒಡೆದು ಮುಗ್ಧರನ್ನು ಎತ್ತಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದು ಗ್ರಾಮದಲ್ಲಿ ಶಾಂತಿ ನೆಮ್ಮದಿಗೆ ಭಂಗ ತರುವಂತ ವಾತಾವರಣ ನಿರ್ಮಾಣವಾಗುತ್ತಿದೆ ಸರ್ಕಾರ ಇಂತಹ ಕಿಡಿಗೇಡಿಗಳ ಮನವಿಯನ್ನು ಪುರಸ್ಕರಿಸಿ ಕಾಕನಹಳ್ಳಿ ಗ್ರಾಮವನ್ನು ವಿಭಜಿಸುವಂತಹ ಕೆಲಸವನ್ನು ಮಾಡುತ್ತಿದೆ. ಆದರೆ ಗ್ರಾಮದಲ್ಲಿ ಗಂಧನಹಳ್ಳಿ ಗ್ರಾಮದಿಂದ ನಡೆಯುತ್ತಿರುವ ದಬ್ಬಾಳಿಕೆ ದೌರ್ಜನ್ಯವನ್ನು ತಡಗಟ್ಟುವಂತ ವ್ಯವಸ್ಥೆಯನ್ನು ಮಾಡುತ್ತಿಲ್ಲ ಎಂದು ಸರ್ಕಾರದ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಹತ್ತಾರು ವರ್ಷಗಳಿಂದಲೂ ಕಾಕನಹಳ್ಳಿ ಗ್ರಾಮದ 1.5 ಎಕರೆ ಕೆರೆಯನ್ನು ಒತ್ತುವರಿ ಮಾಡಿಕೊಂಡು ದಬ್ಬಾಳಿಕೆ ದೌರ್ಜನ್ಯ ನಡೆಸಿದ್ದು, ಏತಕ್ಕಾಗಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ಕಾಕನಹಳ್ಳಿ ಗ್ರಾಮದ ಸಣ್ಣ ಜೋಗಿ ರವರ ಮಗ ಕೃಷ್ಣನನ್ನು ಅಟ್ಟಾಡಿಸಿ ಹೊಡೆದು ಈ ಕೆರೆ ನಿಮ್ಮಪ್ಪನದಲ್ಲ, ಮಗನೇ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಹೆದರಿಸಿ ಬೆದರಿಸಿ ಕಳಿಸಿದ್ದಾರೆ ಎಂದು ಹೃಳಿದರು. ಈ ಪತ್ರಿಕಾಗೋಷ್ಠಿಯಲ್ಲಿ ವೆಂಕಟಜೋಗಿ ಶಿವಣ್ಣ, ಜೋಗಿ ತಮ್ಮಯ್ಯ, ಜೋಗಿ ಯೋಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.