ಬೆಂಗಳೂರು: ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಸತತ 13ನೇ ದಿನ ನೀಡಲಾಗುತ್ತಿರುವ ಶ್ರೀರಾಮದೇವರ ಪವಿತ್ರ ಮಂತ್ರಾಕ್ಷತೆಯನ್ನು ಕ್ಷೇತ್ರದ ಶಾಸಕರಾದ ಕೆ ಗೋಪಾಲಯ್ಯ ರವರು ಟ್ರಸ್ಟ್ ನ ಸ್ಥಳೀಯ ಸದಸ್ಯರು ಮತ್ತು ಸಂಘ ಪರಿವಾರದೊಡನೆ ಪ್ರತಿ ಮನೆಗೆ ತಲುಪಿಸಿದರು.
ಸ್ಥಳೀಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಶ್ರೀರಾಮ ಸೇವೆ ಸಲ್ಲಿಸುತ್ತಿರುವ ಎಲ್ಲಾ ಭಕ್ತಾದಿಗಳಿಗೆ ಫಲ ತಾಂಬೂಲಗಳನ್ನು ನೀಡಿ ಸಂತೋಷ ವ್ಯಕ್ತಪಡಿಸಿದರು.
ಇದೇ ತಿಂಗಳು 21 ಮತ್ತು 22 ರಂದು ಮಹಾಲಕ್ಷ್ಮಿ ಲೇಔಟ್ ನ ರಾಣಿ ಅಬ್ಬಕ್ಕ ಮೈದಾನದಲ್ಲಿ ನಡೆಯುತ್ತಿರುವ ತ್ರಯೋದಶ ಲಕ್ಷ ಶ್ರೀರಾಮ ತಾರಕ ಮಹಾಯಾಗ ಶ್ರೀ ಸೀತಾ ಕಲ್ಯಾಣೋತ್ಸವ ಹಾಗೂ ಕಳಶಾಭಿಷೇಕ ಕಾರ್ಯಕ್ರಮಕ್ಕೆ ಕ್ಷೇತ್ರದ ಎಲ್ಲರೂ ಆಗಮಿಸುವಂತೆ ಮತ್ತು ಪ್ರಭು ಶ್ರೀರಾಮ ದೇವರ ಕೃಪೆಗೆ ಪಾತ್ರರಾಗುವಂತೆ ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಈ ಸಂದರ್ಭದಲ್ಲಿ ಶಾಸಕರು ಎಲ್ಲರನ್ನೂ ಕೋರಿದರು.