ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಆಡುವ ಡೌಟ್ ಎನ್ನಲಾಗುತ್ತಿದೆ. ಕ್ರಿಕ್ಬಜ್ ವರದಿಯ ಪ್ರಕಾರ, ಶಮಿ ಪಾದದ ಗಾಯದಿಂದ ಇನ್ನು ಚೇತರಿಸಿಕೊಳ್ಳದ ಕಾರಣ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಬಹುದು.
2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಿಂದ ನಡೆಯಲಿದೆ.ನಾಯಕ ರೋಹಿತ್ ಶರ್ಮಾ ಸೇರಿದಂತೆ ಆಟಗಾರರ ಕೊನೆಯ ಗುಂಪು ಶುಕ್ರವಾರ (ಡಿ.15) ಜೋಹಾನ್ಸ್ಬರ್ಗ್ಗೆ ತೆರಳಲಿದೆ.
ಆದರೆ 33 ವರ್ಷದ ವೇಗದ ಬೌಲರ್ ಶಮಿ ಅವರು ಈ ವೇಳೆ ತಂಡದ ಜೊತೆ ಇರುವುದಿಲ್ಲ. ಇದುವರೆಗೂ ಬಿಸಿಸಿಐ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
ಶಮಿ ಔಟಾದರೆ ಅವರ ಜಾಗಕ್ಕೆ ಪ್ರಸಿದ್ಧ್ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಶಮಿ ಆಡುವುದು ಅನುಮಾನ ಎಂದರೆ ಪ್ರಸಿದ್ಧ ಪದಾರ್ಪಣೆ ಮಾಡುವ ಅವಕಾಶ ಸಿಗಬಹುದು.