This is the title of the web page
This is the title of the web page

`ಯುವ ಜನಾಂಗದ ಸ್ಫೂರ್ತಿ ಡಾ.ಅಂಬೇಡ್ಕರ್’

ಎಳೆಯ ವಯಸ್ಸಿನಲ್ಲಿಯೇ ಅಪಾರವಾದ ಬುದ್ಧಿವಂತಿಕೆಯನ್ನು ಹೊಂದಿದ್ದವರು. ಜನರ ಕಷ್ಟಗಳಿಗೆ ನೆರವಾಗಿ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಹವಣಿಸುತ್ತಿದ್ದ ಧೀರ ಮತ್ತು ದಿಟ್ಟ ಬಾಲಕ “ಭೀಮರಾವ್”. ಸಂಕಷ್ಟಗಳ ನಡುವೆಯೇ ತಂದೆ ತಾಯಿ ಹಾಗೂ ಗುರುಗಳ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಓದಿ ಉನ್ನತ ಮಟ್ಟದಲ್ಲಿ ಬೆಳೆದು, ಭಾರತದ “ಸಂವಿಧಾನ ಶಿಲ್ಪಿ” ಯಾಗಿ ಅಸ್ಪೃಶ್ಯತೆಯನ್ನು ತೊಡೆದು ಹಾಕಿದವರು ಭೀಮರಾವ್ ಅಂಬೇಡ್ಕರ್.

ಡಾ.ಭೀಮರಾವ್ ಅಂಬೇಡ್ಕರ್ ಜನಿಸಿದ್ದು 14 ಏಪ್ರಿಲ್ 1891ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಗ್ರಾಮದಲ್ಲಿ. ತಂದೆ ಸುಭೇದಾರ್ ರಾಮ್ಜೀ ಸಕ್ಬಾಲ್, ತಾಯಿ ಭೀಮಾಬಾಯಿ ಅವರ ಹದಿನಾಲ್ಕನೇಯ ಪುತ್ರರಾಗಿ ಜನಿಸಿದರು. ಅಂಬೇಡ್ಕರ್ ಅವರ ಇಡೀ ಜೀವನ ಅಸ್ಪೃಶ್ಯರೆನಿಸಿಕೊಂಡವರಿಗೆ ನ್ಯಾಯವನ್ನೂ, ಸಮಾನತೆಯನ್ನೂ ದೊರಕಿಸಿಕೊಡುವುದಕ್ಕೆ ಮುಡಿಪಾಗಿತ್ತು. ಇದರಲ್ಲಿ ಅವರು ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದರು. ಬುದ್ಧನ ತತ್ವಗಳನ್ನು ಅಪ್ಪಿಕೊಂಡು ಬೌದ್ಧ ಧರ್ಮ ಕ್ಕೆ ಸೇರಿದರು. 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭವೊಂದರಲ್ಲಿ ಅಪಾರ ಅಭಿಮಾನಿಗಳೊಡನೆ ಬೌದ್ಧಧರ್ಮಕ್ಕೆ ಸೇರಿದರು.

ಏಪ್ರಿಲ್ 14 ರಂದು “ಸಂವಿಧಾನ ಶಿಲ್ಪಿ”, ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ನಮ್ಮ ದೇಶದ ಪವಿತ್ರ ಗ್ರಂಥ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್. ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ವ್ಯಕ್ತಿ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ.

ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ. 1956ರ ಡಿಸೆಂಬರ್ 6ರಂದು ದಿವಂಗತರಾದರು. ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ಸರ್ಕಾರವು 1991ರಲ್ಲಿ “ಭಾರತ ರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ. ಡಾ. ಅಂಬೇಡ್ಕರ್ ಅವರ ಆದರ್ಶ, ಕೆಲಸ ಕಾರ್ಯಗಳು ಸದಾ ಜೀವಂತವಾಗಿ ಜನಮಾನಸದಲ್ಲಿ ಹಸಿರಾಗಿದೆ.