ಬೆಂಗಳೂರು ಜೆ.ಪಿ ನಗರದ ಸಫೈರ್ ಸ್ಕಿನ್ ಅಸ್ತೆಟಿಕ್ ಕ್ಲಿನಿಕ್ ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 133ನೇ ಜಯಂತಿ ಆಚರಿಸಿದ ಸಂದರ್ಭದಲ್ಲಿ ಚರ್ಮ ರೋಗ ತಜ್ಞೆ ಡಾ.ಶೀಲಾನಟರಾಜ್ ರವರು ಮಾತನಾಡುತ್ತ, ಡಾ. ಅಂಬೇಡ್ಕರ್ ರವರ ಸಂವಿಧಾನ ರಚನೆಯನ್ನು ಕುರಿತು ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಮಚ್ಚಿತ್ತು,
ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿ ಹುಟ್ಟಿ ಈ ದೇಶದ ಶ್ರೇಷ್ಟ ವ್ಯಕ್ತಿ, ವ್ಯಕ್ತಿತ್ವವಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರು ಅಸ್ಪೃಶ್ಯತೆ, ಅಸಮಾನತೆ, ವರ್ಣ ವ್ಯವಸ್ಥೆ ವಿರುದ್ದ ಸಮರ ಸಾರಿ ಭಾರತದ ಅಸಂಖ್ಯಾತ ವರ್ಗಕ್ಕೆ ನ್ಯಾಯ ಒದಗಿಸಿ ಕೊಟ್ಟವರು ಎಂದು ಡಾ. ಶೀಲಾನಟರಾಜ್ ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಸಮಾನತೆ ತತ್ವ ಎತ್ತಿ ಹಿಡಿದ ಅಂಬೇಡ್ಕರ್, ದಮನಿತರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ಮಹಾನಾಯಕ ಎಂದು ಜಯದೇವ ಆಸ್ಪತ್ರೆಯ ಹೃದ್ರೋಗತಜ್ಞರಾದಡಾ.ಹೆಚ್.ಎಸ್.ನಟರಾಜ ಶೆಟ್ಟಿ ರವರು ಡಾ. ಬಿ.ಆರ್. ಅಂಬೇಡ್ಕರ್ ರವರ ಬಗ್ಗೆ ಬಣ್ಣಿಸಿದರು, ಇದೇ ಸಂದರ್ಭದಲ್ಲಿ ಡಾ. ಕಾವ್ಯ, ಬಲಿಜ ಯುವ ಘರ್ಜನೆಯ ಅಧ್ಯಕ್ಷ ನಾಗಾರ್ಜುನ ಸೇರಿದಂತೆ ಅನೇಕರಿದ್ದರು.