ಕೆಜಿಎಫ್: ನಮ್ಮ ದೇಶದ ಅಭಿವೃದ್ಧಿಯ ಹರಿಕಾರರು ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಮಹಾನ್ ನಾಯಕರು. ಶ್ರೀ ಬಾಬು ಜಗಜೀವನ್ ರಾಮ್ ಅವರ ತತ್ವ ಸಿದ್ಧಾಂತಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಎಂದು ನಗರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ, ಡಾ. ಬಾಬು ಜಗಜೀವನ್ ರಾಮ್ ರವರ 119 ನೇ ಜಯಂತಿಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕಿ ರೂಪಕಲಾ ಶಶಿಧರ್.
ಸ್ವಾತಂತ್ರೋತ್ಸವ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಯೋಧರಿಗೆ ಧೈರ್ಯ ತುಂಬಿ ಪಾಕಿಸ್ತಾನ ವಿರುದ್ಧ ಹೋರಾಡಿ ಜಯಗಳಿಸಿದ ಸಂದರ್ಭ ನಾವು ಮರೆತಿಲ್ಲ. ಅಸ್ಪೃಶ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ ಮಹಾನ್ ವ್ಯಕ್ತಿ ಡಾ. ಜಗಜೀವನ್ ರಾಮ್. ಅಂದಿನ ಕಾಲದಲ್ಲೇ ಹಸಿರು ಕ್ರಾಂತಿಯ ಸೃಷ್ಟಿ ಮಾಡಿದ ನಾಯಕ ನಮ್ಮ ದೇಶದ ಸಂವಿಧಾನ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಲ್ಲ ಪ್ರತಿಯೊಬ್ಬ ಭಾರತದಲ್ಲಿರುವ ಮನುಕುಲಕ್ಕೆ ಅದು ಸೀಮಿತ ಇದನ್ನು ನಾವು ಅರಿತುಕೊಳ್ಳಬೇಕು. ಜಾತಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡಬಾರದು ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕು ಇರುತ್ತದೆ ಅದಕ್ಕೆ ನಾವು ದಕ್ಕೆ ತರಬಾರದು. ಎಂದು ಹೇಳಿದರು. ಇಂಥ ಮಹಾನ್ ನಾಯಕರ ಜಯಂತಿಗ
ಳನ್ನು ಆಚರಿಸಿದರೆ ಸಾಲದು. ಆ ಸಮುದಾಯದ ಕುಟುಂಬಕ್ಕೆ ಮತ್ತು ಅವರ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಬೇಕು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅಂಜಲಿ. ಪೌರಾಯುಕ್ತ. ಶ್ರೀಧರ್. ತಹಸಿಲ್ದಾರ್. ಹೆಚ್.ಜೆ. ಭರತ್. ಇ. ಒ. ವೆಂಕಟೇಶಪ್ಪ. ಬಿ.ಇ.ಓ. ನಾರಾಯಣಸ್ವಾಮಿ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸನ್. ಆರೋಗ್ಯ ನಿರೀಕ್ಷಕಿ. ಮಂಗಳ ಗೌರಿ. ಸರ್ಕಾರಿ ನೌಕರ ಸಂಘದ ಅಧ್ಯಕ್ಷ. ಎಲ್. ಎನ್. ನರಸಿಂಹಮೂರ್ತಿ. ಸಿಡಿಪಿಓ ರಾಜೇಶ್ . ಸಬ್ ಇನ್ಸೆ÷್ಪಕ್ಟರ್. ಮಹೇಶ್ ಮಾಲಿ. ಸಮುದಾಯದ ಮುಖಂಡರಾದ ಎಪಿ.ಎಲ್ ರಂಗನಾಥ್. ಗ್ರಾ. ಪಂ. ಮಾಜಿ ಅಧ್ಯಕ್ಷ. ಸುರೇಶ್. ಲಕ್ಷ÷್ಮಯ್ಯ. ಶಂಕರ್ ಮಾದಿಗ. ಬಾಬು. ನಾರಾಯಣಪ್ಪ. ಲೋಕೇಶ್. ಶ್ರೀನಾಥ್ ನಾಸ್ತಿಕ್. ಇನ್ನು ಹಲವಾರು ಮುಖಂಡರು ಭಾಗವಹಿಸಿದ್ದರು.
ಅಭಿವೃದ್ಧಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್: ಶಾಸಕಿ



