ಕೆ.ಆರ್.ನಗರ: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಾಬು ಜಗಜೀವನರಾಮ್ ರವರ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಬೇಕಾದ್ದದ್ದು ನನ್ನ ಜವಾಬ್ದಾರಿ ಆಗಿದ್ದು ಮುಂದಿನ ವರ್ಷದ ಜಯಂತಿ ಆಚರಣೆಯನ್ನು ಆ ಸಮುದಾಯ ಭವನದಲ್ಲೇ ಮಾಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಬಾಬೂಜೀಯವರ ಪ್ರತಿಮೆ ಬಳಿ ಭಾನುವಾರ ತಾಲ್ಲೂಕು ಆಡಳಿತ, ಪುರಸಭೆ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಾದಿಗ ಸಂಘಟನೆಗಳ ವತಿಯಿಂದ ಆಯೋಜಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ 119ನೇ ವರ್ಷದ ಜನ್ಮ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭವನಕ್ಕೆ 2013ರಿಂದ 2018ರ ವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರ ವಿಶೇಷ ಅನುದಾನ ಸೇರಿ ಈವರೆಗೆ 2.50 ಕೋಟಿ ರೂಪಾಯಿಗಳ ಅನುದಾನವನ್ನು ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದ ಶಾಸಕರು ಭವನ ಉದ್ಘಾಟನೆಯಾಗಲು ಬೇಕಾಗುವ ಅನುದಾನ ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಸಮಾಜದವರ ಬೇಡಿಕೆಯಂತೆ ಬಾಬುಜೀ ಯವರ ಪುತ್ತಳಿಯನ್ನು ಬದಲಾವಣೆ ಮಾಡಲು ತೀರ್ಮಾನಿಸಲಾಗಿದ್ದು ಮುಂದಿನ ವರ್ಷದ ಜಯಂತಿ ಒಳಗೆ ಈ ಕೆಲಸವು ಕಾರ್ಯಗಾತಗೊಳ್ಳಲಿದೆ. ಸಮಾಜದ ಬಂದುಗಳು ಇನ್ನಷ್ಠು ಸಂಘಟಿತರಾಗಿ ಬಾಬುಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ತಮ್ಮ ಮಕ್ಕಳನ್ನ ಶಿಕ್ಷಿತರಾಗಿ ಮಾಡಬೇಕೆಂದು ಮನವಿ ಮಾಡಿದರು.
ಬಾಬುಜಿ ರವರು ದೇಶ ಸ್ವಾತಂತ್ರ÷್ಯ ಪಡೆಯಲು ಹೋರಾಟ ಮಾಡಿದ್ದಲ್ಲದೇ ಕೇಂದ್ರದ ಅನೇಕ ಖಾತೆಗಳ ಮಂತ್ರಿಯಾಗಿ ತಮ್ಮದೆ ಆದ ಚಾಪು ಮೂಡಿಸಿದ್ದಾರೆ ಕೃಷಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶಕ್ಕಿದ್ದ ಆಹಾರದ ಆಭದ್ರತೆಯನ್ನು ಹೋಗಲಾಡಿಸಲು ಹಸಿರು ಕ್ರಾಂತಿಯನ್ನು ಆರಂಭಿಸಿದ ಅವರು ಹಸಿರು ಕ್ರಾಂತಿಯ ಹರಿಕಾರರಾಗಿದ್ದರೆಂದು ಬಣ್ಣಿಸಿದರು.
ಕಾರ್ಮಿಕ ಮತ್ತು ರೈಲ್ವೆ ಸಚಿವರಾಗಿ ನೌಕರರಿಗೆ 12ಗಂಟೆಗಳ ಕಾಲ ಇದ್ದ ಕೆಲಸದ ಸಮಯವನ್ನು 8ಗಂಟೆಗೆ ನಿಗದಿ ಮಾಡಿ ದುಡಿಯುವ ನೌಕರರಿಗೆ ಸರ್ಕಾರದವತಿಯಿಂದ ಎಲ್ಲಾ ರೀತಿಯ ಸೌಲಭ್ಯ ದೊರೆಯಲು ಕಾರಣರಾದರು ಇದರ ಜೊತೆಗೆ ರೈಲ್ವೆ ಇಲಾಖೆಯಲ್ಲಿ ಸಕಾಷ್ಠು ಸುಧಾರಣೆಯನ್ನು ತಂದು ದೇಶಕ್ಕೆ ತಮದೇ ಆದ ಅಮೂಲ್ಯ ಕೊಡುಗೆಯನ್ನು ನೀಡಿದ ಮಹಾ ನಾಯಕ ಎಂದು ನುಡಿದರು.ಕೇವಲ ಸರ್ಕಾರದ ಸವಲತ್ತುಗಳ ಮೇಲೆ ಅವಲಂಬಿತರಾಗದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದ ಮುನ್ನೆಲೆಗೆ ತರುವ ಮೂಲಕ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ. ಆಗ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾದ್ಯ. ಇಂದಿನ ಮಹನೀಯರೆಲ್ಲಾ ವಿದ್ಯಾವಂತರಾದ್ದರಿAದಲೆ ಸಮಾಜದಲ್ಲಿ ಸುಧಾರಣೆ ಮಾಡಲು ಸಾದ್ಯವಾಗಿದೆ ಎಂದು ತಿಳಿಸಿದರು.ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಎಲ್.ಶಂಕರ್ಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಆದಿಜಾಂಬವ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೆಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ ಮಾತನಾಡಿದರು. ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್, ಜಿಪಂ ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಪುರಸಭಾ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ಮಾಜಿ ಸದಸ್ಯ ಮಿಕ್ಸರ್ ಶಂಕರ್, ಮುಖ್ಯಾಧಿಕಾರಿ ರಮೇಶ್, ನಗರಯೋಜನ ಪ್ರಾದಿಕಾರದ ಅಧ್ಯಕ್ಷ ಗಡ್ಡ ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಎಂಎಸ್ ಎಸ್ ತಾಲೂಕು ಅಧ್ಯಕ್ಷ ಎಂ.ಎಸ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಕುಮಾರ್, ಖಜಾಂಚಿ ಹೆಚ್.ಎಂ.ಮAಜು, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಎಂ.ಎಸ್.ನAಜುAಡಸ್ವಾಮಿ, ದಸಂಸ ತಾಲೂಕು ಅಧ್ಯಕ್ಷ ಎಂ.ಎಸ್.ಮಲ್ಲೇಶ್, ಮುಖಂಡರುಗಾಳದ ಎಂ.ಜೆ.ಕುಮಾರ್, ಕಲ್ಲಹಳ್ಳಿ ಶ್ರೀನಿವಾಸ್, ನವೀದ್, ಎಂ.ಟಿ.ರಾಜೇಶ್, ಆದರ್ಶ, ವೆಂಕಟೇಶ್, ಈರಯ್ಯ, ಕರ್ಣಕುಮಾರ್, ನಾಗೇಂದ್ರ, ಸಾಮೀಯಾನ ರಮೇಶ್, ತಿರುಮಲ, ವಜ್ರೇಶ್, ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
`ಡಾ.ಬಾಬು ಜಗಜೀವನರಾಮ್ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ’



