ಪೀಣ್ಯ,ದಾಸರಹಳ್ಳಿ: ‘ಆದಿ ಚುಂಚನಗಿರಿ ಕ್ಷೇತ್ರದತ್ತ ವಿಶ್ವದ ಅನೇಕ ರಾಷ್ಟ್ರಗಳ ಜನರು ತಿರುಗಿ ನೋಡುವಂತೆ ಮಾಡಿದ ಕೀರ್ತಿ ಆದಿಚುಂಚನಗಿರಿ ಶ್ರೀ ಗಳಿಗೆ ಸಲ್ಲುತ್ತದೆ. ತಮ್ಮ ಜನಪರ ಕಾಳಜಿಯಿಂದಾಗಿ ಆದಿಚುಂಚನಗಿರಿ ಕ್ಷೇತ್ರದ ವತಿಯಿಂದ ಬಡವರು, ನೊಂದವರಿಗೆ ಸದಾ ಸಹಾಯ ಹಸ್ತ ನೀಡುತ್ತಿದ್ದರು.
ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ ಎಲ್ಲಾ ಜನಾಂಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕ್ಷೇತ್ರದಲ್ಲೂ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು’, ಎಂದು ದಾಸರಹಳ್ಳಿ ಕಾಂಗ್ರೆಸ್ ಮುಖಂಡರಾದ ಜಿ ಧನಂಜಯ ಗೌಡ ಹೇಳಿದರು.
ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 79ನೇ ಜನ್ಮದಿನದ ಪ್ರಯುಕ್ತ ಸುಂಕದಕಟ್ಟೆ ಮುಖ್ಯರಸ್ತೆಯ ಗಂಗಾಧರಪ್ಪ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ‘ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನನ್ನನ್ನೂ ಒಳಗೊಂಡಂತೆ ಅಪಾರ ಸಂಖ್ಯೆಯಲ್ಲಿ ಮುಖಂಡರು ಸಾಗುತ್ತಿದ್ದಾರೆ. ಯುವಜನತೆ ಸನ್ಮಾರ್ಗದಲ್ಲಿ ಸಾಗಬೇಕಾದರೆ ಆದಿಚುಂಚನಗಿರಿ ಶ್ರೀಗಳ ಮಾರ್ಗದರ್ಶನ ಅನುಸರಿಸುವುದು ಅಗತ್ಯ’, ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಗಂಗಾಧರಪ್ಪ, ಮನೋಜ್, ರಾಜಶೇಖರ್, ಜೇಡರಹಳ್ಳಿ ಸೂರಿ, ಜಾಗೃತಿ ಆನಂದ್, ವೆಂಕಟರಾಜು, ಕೃಷ್ಣಮೂರ್ತಿ, ಮುತ್ತುಜಾ, ಹೇಮಾ ರಾಜೇಂದ್ರನ್, ಉಷಾರಾಜ್, ರೇಣುಕಾ, ಸೌಮ್ಯ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.