ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮನೋರಾಯನಪಾಳ್ಯದ ಎಂ.ಎಸ್.ಕಾನ್ವೆಂಟ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿದ ಪದ್ಮಶ್ರೀ ಡಾ: ಚಂದ್ರಶೇಖರ್ ರವರು ಶಾಲೆಯ ಮಕ್ಕಳಿಗೆ ಪರಿಸರ ದಿನದ ಮಹತ್ವ ಹಾಗೂ ಮನುಷ್ಯರ ಸುತ್ತಲಿನ ಪರಿಸರದ ಜೊತೆ ಮಾನಸಿಕ ಹಾಗೂ ದೈಹಿಕವಾಗಿ ಎಷ್ಟು ಆರೋಗ್ಯವಾಗಿದ್ದೇವೆ ಎಂಬುದನ್ನು ಅರಿಯಬೇಕು ನಮ್ಮ ಪ್ರತಿದಿನವೂ ಪರಿಸರ ದಿನಾಚರಣೆಯಾಗಬೇಕು.
ಆರೋಗ್ಯದ ಸಮತೋಲನ ನಮ್ಮ ದೈನಂದಿನ ಚಟುವಟುಕೆ ಎಷ್ಟು ಪರಿಸರ ಸ್ನೇಹಿಯಾಗಿದೆ ಎಂಬುದನ್ನು ನಾವು ಅರಿಯಬೇಕು ಆಗ ಮಾತ್ರ ಪರಿಸರ ದಿನಚರಾಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.ಪೋಲಿಸ ಇನ್ಸ್ಪೆಕ್ಟರ್ ಆದ ಶಿವಕುಮಾರ್ ಅವರು ಮಾತನಾಡಿ ಪರಿಸರ ಪ್ರಜ್ಞೆ ನಮಗೆ ಸಾಹಿತ್ಯದಿಂದ ಮೂಡುತ್ತದೆ ವಿದ್ಯಾರ್ಥಿಗಳು ಮತ್ತು ಇಂದಿನ ಯುವ ಜನಾಂಗ ಕುವೆಂಪು ,ಬೇಂದ್ರೆ ಮತ್ತು ಜನಪದರನ್ನು, ಮಾಸ್ತಿಯವರನ್ನು ಓದಿಕೊಳ್ಳಬೇಕು ಆಗ ಮಾತ್ರ ಪರಿಸರದ ಮಹತ್ವ ತಿಳಿಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಮಾನ್ಯ ಶಿವ ಪ್ರಕಾಶ್ ರವರು ಮಾತನಾಡಿ ಪರಿಸರ ದಿನ ನಮಗೆ ಎಷ್ಟು ಮುಖ್ಯ ಹಾಗೇ ನಮ್ಮ ಪರಿಸರ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಅಷ್ಟೇ ಮುಖ್ಯ ಎಂದು ತಿಳಿಸಿದರು.ಪ್ರಾಂಶುಪಾಲರಾದ ನಂದಿನಿ ಪ್ರಕಾಶ್ ರವರು ಈ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ವಿದ್ಯಾರ್ಥಿಗಳು ವಯಸ್ಸಿನಲ್ಲೇ ಪರಿಸರ ಜಾಗೃತಿ ಮೂಡಿಸಿಕೊಂಡರೆ ತಮ್ಮ ಜೀವನದ ಉದ್ದಕ್ಕೂ ಪರಿಸರ Animals ಉಳಿಯುತ್ತದೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಎಂ.ಎಸ್. ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ ಉಪನ್ಯಾಸಕರಾದ ಶ್ರೀ ಯೇಜಸ್ ಪಾಷ, ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.