ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡಿ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾದ ದೇಶಕ್ಕೆ ಡಾ.ಸಿ.ಎನ್. ಮಂಜುನಾಥ್ ಅವರ ಆಯ್ಕೆ ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವ ಉಳಿವಿಗೆ ಮಂಜುನಾಥ್ ಅವರನ್ನು ಗೆಲ್ಲಿಸಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಅವರು ಮನವಿ ಮಾಡಿದರು.
ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ಹೃದ್ರೋಗಿಗಳಿಗೆ ಜೀವದಾನ ನೀಡಿ, ನೊಂದವರ ಕಣ್ಣಿರು ಒರೆಸುವ ಕಾಯಕದಲ್ಲಿ ಮಾತಾಗಿರುವ ಹೃದಯವಂತ ಹೃದ್ರೋಗ ತಜ್ಞರು. ಜಯದೇವ ಆಸ್ಪತ್ರೆ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆಯಲು ಇವರು ಪಟ್ಟಂತಹ ಶ್ರಮ ಅಗಾಧವಾದುದು. ಇವರು ಸೇವೆ ನಡೀ ದೇಶಕ್ಕೆ ಅಗತ್ಯವಾಗಿದ್ದು, ಇವರನ್ನು ಸಂಸದರನ್ನಾಗಿ ಆಯ್ಕೆ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರು ಸಂಕಲ್ಪ ಮಾಡಬೇಕು ಎಂದು ಕೋರಿದ್ದಾರೆ.
ವಿಶ್ವ ಕನ್ನಡ ಕಲಾ ಕೂಟದ ಉಪಾಧ್ಯಕ್ಷ ಹಲ್ಲೇಗೆರೆ ಕೃಷ್ಣ ಮಾತನಾಡಿ, ಡಾ. ಸಿ.ಎನ್. ಮಂಜುನಾಥ್ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ನಾಡಿನ ಖ್ಯಾತ ಹೃದಯ ತಜ್ಞರಲ್ಲಿ ಒಬ್ಬರಾದ ಡಾ. ಮಂಜುನಾಥ್, ತಮ್ಮ ಸರಳ ಸೌಮ್ಯ ಸ್ವಭಾವದಿಂದಲೇ ಜನಪ್ರಿಯ. ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ದೇವೇಗೌಡರ ಅಳಿಯನಾಗಿದ್ದರೂ, ಅವರ ಪ್ರಭಾವ ಬಳಸದೇ ವೈದ್ಯಕೀಯ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ. ಮಂಜುನಾಥ್ ಕಿರೀಟಕ್ಕೆ ಈಗಾಗಲೇ ಪದ್ಮಶ್ರೀ ಗೌರವ ಸೇರಿದೆ.
ಸರ್ಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ಸಂಸ್ಥೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಡಾ. ಮಂಜುನಾಥ್ ಅವರಿಗೆ ಸಲ್ಲುತ್ತದೆ. ರೋಗಿಗಳ ಬಾಳಿಗೆ ಭರವಸೆಯ ಬೆಳಕಾಗಿ, ಲಕ್ಷಾಂತರ ರೋಗಿಗಳ ಪ್ರಾಣ ಉಳಿಸಿ, ಅನೇಕ ಕುಟುಂಬಗಳಿಗೆ ಮರು ಜೀವ ನೀಡಿದ್ದಾರೆ ಎಂದು ಹೇಳಿದರು.ಜೆಡಿಎಸ್ ಮುಖಂಡರಾದ ಯಶೋಧಾ ರಾಜಣ್ಣ ಅವರು ಮಾತನಾಡಿ, ಸಹಸ್ರಾರು ರೋಗಿಗಳಿಗೆ ಜೀವದಾತ ಹಾಗೂ ಹೃದಯವಂತ ಡಾ.ಸಿ.ಎನ್.ಮಂಜುನಾಥ್ ಅವರಂತ ಮಹನೀಯರನ್ನು ಪಡೆದ ಕನ್ನಡ ನಆಡಿನ ಜನ ಪುಣ್ಯವಂತರು. ಡಾ.ಸಿ.ಎನ್.ಮಂಜುನಾಥ್ ಅವರನ್ನು ಅವರನ್ನು ಲೋಕಸಭಾ ಚುನಾವಣೆಯಲ್ಲಿ ಲೀಡ್ನಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೋರಾಟಗಾರ ಬಿ.ಎಚ್.ಸುರೇಶ್ ಅವರು ಮಾತನಾಡಿ, ಮಂಜುನಾಥ್ ಅವರ ಸೇವೆಯನ್ನು ಒಳಗೊಂಡಂತೆ ಹೃದಯವಂತ ಎಂಬ ಸಾಕ್ಷ್ಯಾಚಿತ್ರ ಬಿಡುಗಡೆ ಮಾಡಲಾಗಿದೆ. ಅಮೇರಿಕಾದಲ್ಲಿಯೂ ಈ ಸಾಕ್ಷ್ಯಚಿತ್ರ ಪ್ರಖ್ಯಾತಿ ಪಡೆಯಿತು. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಅಳವಡಿಸಿಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದರು.
ಸಮಾನ ಮನಸ್ಕರ ವೇದಿಕೆಯ ಬಿ.ಎಚ್.ಸುರೇಶ್, ಜೆಡಿಎಸ್ ಮುಖಂಡ ಎ.ಎಸ್.ಗೋವಿಂದೇಗೌಡ, ಒಕ್ಕಲಿಗರ ವಿಕಾಸ ವೇದಿಕೆಯ ಯಮುನಾ, ಇಂದುಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಪದ್ಮ ನಾಗರಾಜು, ಸಾಹಿತಿ ಗುಣವಂತ ಮಂಜು ಭಾಗವಹಿಸಿದ್ದರು.